ಸಾಂದರ್ಭಿಕ ಚಿತ್ರ 
ರಾಜ್ಯ

ಕಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಜಾಲಹಳ್ಳಿ ಪೊಲೀಸರಿಂದ ಐವರ ಬಂಧನ

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮೇಲೆ ಇತ್ತೀಚೆಗೆ ನಡೆದಿದ್ದ ಹಲ್ಲೆ ಯತ್ನ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮೇಲೆ ಇತ್ತೀಚೆಗೆ ನಡೆದಿದ್ದ ಹಲ್ಲೆ ಯತ್ನ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ

ವಿವಿಧ ಠಾಣೆಗಳಲ್ಲಿ ರೌಡಿಶೀಟರ್‌ಗಳಾಗಿರುವ ದಿಲೀಪ್, ಅಭಿ, ಕಾರ್ತಿಕ್, ಪವನ್, ಭರತ್ ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜು.29ರಂದು ರಾತ್ರಿ 9ರ ಸುಮಾರಿನಲ್ಲಿ ಜಾಲಹಳ್ಳಿಯ ಎಂಇಎಸ್ ರಸ್ತೆ, ಮುತ್ಯಾಲನಗರ ನಿವಾಸಿ ಶಶಿಕುಮಾರ್ ಕಾರಿನಲ್ಲಿ ಮನೆ ಬಳಿ ಬರುತ್ತಿದ್ದಂತೆಯೇ ಅವರ ಮೇಲೆ ನಾಲ್ವರು ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ತಪ್ಪಿಸಿಕೊಳ್ಳಲು ಮತ್ತೆ ಕಾರಿನೊಳಗೆ ಕುಳಿತಾಗ ಆರೋಪಿಗಳು ಲಾಂಗ್‍ನಿಂದ ಮೂರ್ನಾಲ್ಕು ಬಾರಿ ಹೊಡೆದಿದ್ದಾರೆ. ರಕ್ಷಣೆಗಾಗಿ ಎಡಗೈ ಅಡ್ಡ ಹಿಡಿದಿದ್ದರಿಂದ ಎಡಗೈ ಮತ್ತು ಎಡಭಾಗದ ಸೊಂಟದ ಬಳಿ ಗಾಯವಾಗಿತ್ತು.

ತಕ್ಷಣ ರಕ್ಷಣೆಗಾಗಿ ಪಿಸ್ತೂಲನ್ನು ಹೊರಗೆ ತೆಗೆಯುತ್ತಿದ್ದಂತೆ ಆರೋಪಿಗಳು ಪರಾರಿಯಾ ಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದಾಗ ಆರೋಪಿಗಳು ಚೆಲ್ಲಾಪಿಲ್ಲಿ ಯಾಗಿ ಪರಾರಿಯಾಗಿದ್ದರು. ನಂತರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದ ಶಶಿಕುಮಾರ್ ಅವರು ಜಾಲಹಳ್ಳಿ ಠಾಣೆಗೆ ದೂರು ನೀಡಿದ್ದರು.

ಪತ್ತೆ ಕಾರ್ಯದ ವೇಳೆ ಆರೋಪಿಗಳ ಸುಳಿವು ಸಿಕ್ಕಿತ್ತು. ಆರು ತಿಂಗಳ ಹಿಂದೆ ಶಶಿಕುಮಾರ್ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಶಶಿಕುಮಾರ್ ಮನೆ ಸಮೀಪದ ಮನೆಯೊಂದರಲ್ಲಿ ಆರೋಪಿಗಳು ಬಾಡಿಗೆಗೆ ಇದ್ದರು’ ಎಂದು ಪೊಲೀಸರು ವಿವರಿಸಿದರು. ‘ಮನೆ ಮೇಳೆ ದಾಳಿ ನಡೆಸಿ, ಕೃತ್ಯಕ್ಕೆ ಬಳಸಿದ್ದ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಚ್ಚು ಮತ್ತು ಲಾಂಗುಗಳು, ಎರಡು ದ್ವಿಚಕ್ರ ವಾಹನ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಖಾಸಗಿ ಶಾಲೆಯ ಸಂಸ್ಥಾಪಕರನ್ನು ಅಪಹರಿಸಿದ ಆರೋಪದ ಮೇಲೆ 2019 ರಲ್ಲಿ ಬಂಧನಕ್ಕೊಳಗಾದ ರವಿ, ಜೈಲಿನಲ್ಲಿ ಆರೋಪಿಗಳನ್ನು ಭೇಟಿಯಾಗಿದ್ದ. ಬಿಡುಗಡೆಯಾದ ನಂತರ, ಆತ ಅವರನ್ನು ಸಂಪರ್ಕಿಸಿದನು. ಆತ ಅವನ ಚಲನವಲನಗಳನ್ನು ಗಮನಿಸುವಂತೆ ದಾಳಿಕೋರರು ಆತನ ಚಲನವಲನಗಳನ್ನು ಸುಲಭವಾಗಿ ಪತ್ತೆಹಚ್ಚಲು ಬಾಡಿಗೆಗೆ ಮನೆಯೊಂದನ್ನು ತೆಗೆದುಕೊಂಡಿದ್ದರು. ಪರಾರಿಯಾಗಿರುವ ರವಿ ಸೇರಿದಂತೆ ಇತರ ಆರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT