ಜೋಗ ಜಲಪಾತ 
ರಾಜ್ಯ

ವ್ಯರ್ಥ ಖರ್ಚು: ಜೋಗ ಜಲಪಾತ ಅಭಿವೃದ್ಧಿ ಪ್ರಸ್ತಾವನೆ ಬಗ್ಗೆ ಅಧಿಕಾರಿಗಳ ಅತೃಪ್ತಿ!

ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರ ಮತ್ತು ಶಿವಮೊಗ್ಗ ಜಿಲ್ಲಾಡಳಿತದ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಪ್ರಸ್ತಾವನೆಯೊಂದನ್ನು ಅನುಮೋದಿಸಿದರು.

ಬೆಂಗಳೂರು: ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರ ಮತ್ತು ಶಿವಮೊಗ್ಗ ಜಿಲ್ಲಾಡಳಿತದ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಪ್ರಸ್ತಾವನೆಯೊಂದನ್ನು ಅನುಮೋದಿಸಿದರು.

ಪ್ರಸ್ತಾವನೆಯ ಪ್ರಕಾರ, ಜಲಪಾತ ಮತ್ತು ಸುತ್ತಮುತ್ತಲಿನ ಕಾಂಕ್ರೀಟ್ ಮತ್ತು ನಾಗರಿಕ ಕೆಲಸಗಳಿಗಾಗಿ ಮೂರು ಹಂತಗಳಲ್ಲಿ 185 ಕೋಟಿ ರೂ. ವೆಚ್ಚವಾಗಲಿದೆ. ಮೇ 2021 ರಲ್ಲಿ ರಚಿಸಿದ ಮತ್ತು ಜುಲೈ 2021 ರಲ್ಲಿ ಅನುಮೋದನೆಗೊಂಡ ಪ್ರಸ್ತಾವನೆಯು ಜೋಗ ನಿರ್ವಹಣಾ ಸಮಿತಿಯ ಭಾಗವಾಗಿರುವ ಪ್ರವಾಸೋದ್ಯಮ ಇಲಾಖೆಯ ಅನೇಕ ಅಧಿಕಾರಿಗಳೊಂದಿಗೆ ಸರಿಯಾಗಲಿಲ್ಲ.

ರೋಪ್‌ವೇ ಸ್ಥಾಪನೆ, ಶರಾವತಿ ಪ್ರತಿಮೆ ಮತ್ತು ಮುಖ್ಯ ದ್ವಾರ, ಮಕ್ಕಳು ಮತ್ತು ವಿಜ್ಞಾನ ವಸ್ತು ಸಂಗ್ರಹಾಲಯ, ಮುಖ್ಯ ವೀಕ್ಷಣಾ ಸ್ಥಳ, ಕ್ಯಾಂಟೀನ್ ಮತ್ತು ವಿಶ್ರಾಂತಿ ಸ್ಥಳ, ಬಾಹ್ಯ ಮತ್ತು ಮಧ್ಯಂತರ ರಸ್ತೆಗಳು, ಪಾದಚಾರಿ ಮಾರ್ಗಗಳು, ಆಡಳಿತ ವಿಭಾಗ, ಡೆಸ್ಕ್ ಕೇಂದ್ರಗಳು, ಭದ್ರತಾ ಸಿಬ್ಬಂದಿ ಕೊಠಡಿಗಳು, ವಿಶೇಷ ಪಾರ್ಕಿಂಗ್ ಸೌಲಭ್ಯಗಳು, ಟ್ರಾಲಿ ಕೊಠಡಿಗಳು, ಕ್ವಾರ್ಟರ್ಸ್, ಬೋಟಿಂಗ್ ಮತ್ತು ಜಲಕ್ರೀಡೆಗಳು, ವಸ್ತುಸಂಗ್ರಹಾಲಯ, ಹೋಂಸ್ಟೇಗಳು, ಎಲ್ಲಾ ಕಾಲುದಾರಿಗಳ ಉದ್ದಕ್ಕೂ ವಿದ್ಯುತ್ ಕೆಲಸಗಳನ್ನು ಕೈಗೊಳ್ಳುವುದು ಈ ಪ್ರಸ್ತಾವನೆಯಲ್ಲಿದೆ.

ಯೋಜನೆಯು ಅನೇಕ ಅನಗತ್ಯ ನಿರ್ಮಾಣಗಳನ್ನು ಪಟ್ಟಿ ಮಾಡಿದೆ. ಕಳೆದ ವರ್ಷವಷ್ಟೇ ಸಮಿತಿಯು 165 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಚಿಸಲು ಯೋಜಿಸಿದ್ದು, ಈಗ ಮತ್ತಷ್ಟು ಹೆಚ್ಚಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶವು ಭೂಕುಸಿತ ಮತ್ತು ಪರಿಸರ ವ್ಯವಸ್ಥೆಯ ನಾಶದ ಭೀತಿ ಇರುವುದರಿಂದ, ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯರು ಶಿವಮೊಗ್ಗದಲ್ಲಿ ಯಾವುದೇ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳದಂತೆ ತೀವ್ರವಾಗಿ ವಿರೋಧಿಸಿದ್ದಾರೆ. 

ರೋಪ್‌ವೇಗಳು ಅರಣ್ಯೇತರ ಭೂಮಿಯಲ್ಲಿರುತ್ತವೆ ಎಂದು ಸಮಿತಿಯ ಸದಸ್ಯರು ಹೇಳುತ್ತಿದ್ದರೂ, ಇನ್ನೊಂದು ತುದಿಯು ಅರಣ್ಯ ಭೂಮಿಯನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದಾರೆ. ಜಲಪಾತದ ಮೂಲಕ ರೋಪ್ ವೇ ನಿರ್ಮಿಸುವ ಯೋಜನೆ ವ್ಯರ್ಥ ಖರ್ಚು. ರಾತ್ರಿಯಲ್ಲಿ ಜಲಪಾತವನ್ನು ಬೆಳಗಿಸುವುದನ್ನು ಈಗಾಗಲೇ ಪ್ರಬಲ ವಿರೋಧ ವ್ಯಕ್ತವವಾಗಿದೆ ಎಂದು ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT