ರಾಜ್ಯ

ವಿಶ್ವ ಪ್ರಸಿದ್ಧ ಗೋಲ್ ಗುಂಬಜ್ ಒಂದು ಭಾಗದ ಮೇಲ್ಛಾವಣಿ ಕುಸಿತ: 450 ವರ್ಷಗಳ ಪ್ರಾಚೀನ ಸ್ಮಾರಕಕ್ಕೆ ಹಾನಿ

Shilpa D

ವಿಜಯಪುರ: ವಿಶ್ವವಿಖ್ಯಾತ ಗೋಲ್ ಗುಂಬಜ್‌ನ ಪೂರ್ವ ಭಾಗದಲ್ಲಿ ಚಜ್ಜಾದ ಒಂದು ಭಾಗದ ಹೊದಿಕೆ ಕುಸಿದಿದೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸಿದೆ.

ಸುಮಾರು 450 ವರ್ಷಗಳ ಹಿಂದಿನ ಸ್ಮಾರಕ ಹಲವು ದಶಕಗಳ ನಂತರ ಮೊದಲ ಬಾರಿಗೆ ಹಾನಿಗೊಳಗಾಗಿದೆ,  ಇಂಡೋ -ಇಸ್ಲಾಮಿಕ್ ಶೈಲಿಯಲ್ಲಿ ಆದಿಲ್ ಶಾ ನಿರ್ಮಿಸಿದ ಸ್ಮಾರಕ ಇದಾಗಿದೆ.

ಗೋಲ್ ಗುಂಬಜ್ ನ ಕಿಟಕಿಯ ಮೇಲೆ ಹಾಕಿದ್ದ ಹಾಸುಗಲ್ಲು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಚಜ್ಜಾದ ಎಷ್ಟು ಭಾಗ ಕುಸಿದಿದೆ ಎಂಬುದನ್ನು ಪ್ರಾಚ್ಯ ಸಂಶೋಧನಾ ಇಲಾಖೆ ಅಂದಾಜು ಮಾಡುತ್ತಿದೆ, ಸದ್ಯ ಪ್ರವಾಸಿಗರಿಗೆ ಪ್ರವೇಶ ನಿಷೇಧಗೊಳಿಸಲಾಗಿದೆ.

ಹವಾಮಾನದ ತೀವ್ರ ವೈಪರೀತ್ಯದಿಂದ ಸ್ಮಾರಕಕ್ಕೆ ಹಾನಿಯುಟಾಗಿದೆ, ಮೇಲ್ಚಾವಣಿ ಸರಿ ಪಡಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಪ್ರಾಚ್ಯ ಸಂಶೋಧನಾ ಇಲಾಖೆ ವಿಎಸ್ ಬಡಿಗೇರ್ ತಿಳಿಸಿದ್ದಾರೆ.

ಉನ್ನತ ಅಧಿಕಾರಿಗಳಿಂದ ಅನುಮೋದನೆ ದೊರೆತ ನಂತರ  ದುರಸ್ತಿ ಕಾರ್ಯ ಆರಂಭವಾಗುವುದು ಎಂದು ತಿಳಿಸಿದ್ದಾರೆ, ಹಿಂದಿನ ಕಾಲದ ಅದೇ ಪ್ರಕಾರದ ವಸ್ತುಗಳನ್ನು ಬಳಸಿ ಅದನ್ನು ಸ್ವಂತಿಕೆಗೆ ಮರುಸ್ಥಾಪಿಸಲಾಗುತ್ತದೆ. ಇದರ ಜೊತೆಗೆ ಹಿಂದೆ ಹಾನಿಯುಂಟಾಗಿದ್ದ ಸ್ಮಾರಕದ ಇತರ ಭಾಗಗಳನ್ನು ದುರಸ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

450 ವರ್ಷದ ಹಿಂದಿನ ಸ್ಮಾರಕವನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ, ಶೀಘ್ರದಲ್ಲೇ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಎರಡು ಮೂರು ವರ್ಷಕ್ಕೊಮ್ಮೆ ಗೋಲ್ ಗುಂಬಜ್ ಹಲವು ಭಾಗಗಳು ಹಾನಿಗೊಳಗಾಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಸುಲಭವಾಗಿ ಮೇಲ್ಛಾವಣಿ ದುರಸ್ಥಿ ಕಾರ್ಯ ಮಾಡಲು ಸಾಧ್ಯವಿಲ್ಲ, ಇದಕ್ಕೆ ಹಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ಹೇಳಲಾಗಿದೆ.

SCROLL FOR NEXT