ರಾಜ್ಯ

ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಗೆ ವಿರೋಧ: ದಲಿತ ಸಂಘಟನೆಗಳ ಪ್ರತಿಭಟನೆ

Shilpa D

ಮೈಸೂರು: ಉಚ್ಛಾಟಿತ ಬಿಎಸ್ ಪಿ ಶಾಸಕ ಎನ್ ಮಹೇಶ್ ಬಿಜೆಪಿ ಸೇರಿದ್ದನ್ನು ವಿರೋಧಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತ ಪಡಿಸಿದರು.  ಮಹಿಳಾ ಘಟಕ ಪೊರಕೆ ಹಿಡಿದು ಪ್ರತಿಭಟನೆ ನಡೆಸಿತು.

ಒಂದು ಕಾಲದಲ್ಲಿ ಅಂಬೇಡ್ಕರ್ ವಾದ ಮತ್ತು ಜಾತ್ಯತೀತ ಮೌಲ್ಯಗಳನ್ನು ಬೋಧಿಸಿದ ಮಹೇಶ್ ಅವರು ಹಿಂದುಳಿದ ಸಮುದಾಯಗಳನ್ನು ತೊರೆದಿದ್ದಾರೆ ಎಂದು ಅವರು ಆರೋಪಿಸಿದರು. ಅವರು ತಮ್ಮ ರಾಜಕೀಯ ಉಳಿವಿಗಾಗಿ ಬಿಜೆಪಿಗೆ ಸೇರಿದರು ಎಂದು ಆಪಾದಿಸಿದ್ದಾರೆ.

ಮಹೇಶ್ ಅವರು ಬಿಜೆಪಿ ಸೇರುವ ಮೂಲಕ ದಲಿತ ನಾಯಕರನ್ನು ಅವಮಾನಿಸಿದ್ದಾರೆ, ಮಹೇಶ್ ಅವರು ಮನುವಾದಿ ಸಂಸ್ಕೃತಿಯ ವಿರುದ್ಧ ಮಾತನಾಡುವ ಮೂಲಕ ಬಿಎಸ್‌ಪಿ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು. ಆದರೆ ಬಿಜೆಪಿ ಸೇರುವ ಮುನ್ನ ಕ್ಷೇತ್ರದ ಮತದಾರರ ಜೊತೆ ಚರ್ಚಿಸದೇ ನಿರ್ಧಾರ ತೆಗೆದುಕೊಳ್ಳುವ ಮೂಲಕ  ಕೈಬಿಟ್ಟಿರುವುದು ದುರದೃಷ್ಟಕರ ಎಂದು ಕಾರ್ಪೊರೇಟರ್ ಆರ್ ಪಿ ನಂಜುಂಡಸ್ವಾಮಿ ದೂರಿದ್ದಾರೆ. ಮಹೇಶ್ ರಾಜೀನಾಮೆ ನೀಡುವವರೆಗೂ ಅವರು ಅವಕಾಶವಾದಿ ರಾಜಕಾರಣದ ವಿರುದ್ಧ ಅನಿರ್ದಿಷ್ಟ ಚಳುವಳಿಯನ್ನು ನಡೆಸುವುದಾಗಿ ತಿಳಿಸಿದ್ದಾರೆ.

SCROLL FOR NEXT