ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ ಆಗಸ್ಟ್ 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

9 ಮತ್ತು 10ನೇ ತರಗತಿಗಳು ಸದ್ಯಕ್ಕೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ನಡೆಯುತ್ತವೆ. ಶಾಲೆಗೆ ಹಾಜರಾಗಲು ವಿದ್ಯಾರ್ಥಿಗಳು ಪೋಷಕರಿಂದ ಸಮ್ಮತಿ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.

ಮೊದಲೇ ಹೇಳಿದಂಥೆ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಶಾಲೆಗಳು ಆರಂಭವಾಗಲಿದೆ.

9 ಮತ್ತು 10ನೇ ತರಗತಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಲಾಗಿದೆ. ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯ ಜತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರ‌ ಕಡ್ಡಾಯವಾಗಿದೆ.

ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ. ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ನಡೆಯಲಿದೆ. ಶನಿವಾರ ಮಾತ್ರ‌ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಯಲಿದೆ ಎಂದು ತಿಳಿಸಲಾಗಿದೆ.

* ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 
* ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ
* 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
* ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕು
* ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
* ಶಾಲೆ ಪ್ರವೇಶ ಮಾರ್ಗದದಲ್ಲಿ ಕನಿಷ್ಠ 3 ರಿಂದ 6 ಅಡಿ ಅಂತರದಲ್ಲಿ ವೃತ್ತ ಹಾಕಬೇಕು
* ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು
* ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು
* ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು
* ಶಿಕ್ಷಕರು ಕನಿಷ್ಠ ಒಂದು ಸಾರಿಯಾದರೂ ಲಸಿಕೆ ಪಡೆದುಕೊಂಡಿದ್ದಾರೆಯೇ? ಎಂಬುದನ್ನು ತಿಳಿಸಬೇಕು
* ಕೊರೋನಾ ನಿಯಮಗಳು ಪಾಲನೆಯಾಗುತ್ತ ಇದೆಯೇ? ಇಲ್ಲವೇ? ಎಂಬುದರ ಮೇಲ್ವಿಚಾರಣೆ ನೋಡಲ್ ಅಧಿಕಾರಿಯ ಜವಾಬ್ದಾರಿ
* ಎಸ್‌ಡಿಎಂಸಿ ಸಮಿತಿ ಜತೆ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ನಡೆಸಬೇಕು ಎಂಬ ನಿಯಮಗಳನ್ನು ತಿಳಿಸಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌!

ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ನೆಕ್ಲೆಸ್ ಕದ್ದ ಮಹಿಳೆಯರು; ಖತರ್ನಾಕ್ ಕಳ್ಳಿಯರ "ಕೈ"ಚಳಕ CCTVಯಲ್ಲಿ ಸೆರೆ!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ