ರಾಜ್ಯ

ಆರ್ ಟಿ ಪಿಸಿಆರ್ ಕಡ್ಡಾಯಕ್ಕೆ ವಿರೋಧ: ಮಂಜೇಶ್ವರ ಶಾಸಕ ಅಶ್ರಫ್ ಉಪವಾಸ ಸತ್ಯಾಗ್ರಹ

Shilpa D

ಕಾಸರಗೋಡು: ಎರಡು ಡೋಸ್ ಲಸಿಕೆ ಪಡೆದಿರುವವರಿಗೂ ಆರ್ ಟಿ ಪಿಸಿಆರ್ ಕಡ್ಡಾಯ ಮಾಡಿರುವ ಕರ್ನಾಟಕ ಸರ್ಕಾರದ ಆದೇಶವನ್ನು ವಿರೋಧಿಸಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಕಾಸರಗೋಡು-ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ತಲಪ್ಪಾಡಿಯಲ್ಲಿ ಮಾತನಾಡಿದ ಅಶ್ರಫ್ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ ಕರ್ನಾಟಕ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ತಲಪ್ಪಾಡಿ ಒಂದು ಪ್ರಮುಖ ಅಂತಾರಾಜ್ಯ ಗಡಿಯಾಗಿದೆ. ಕರ್ನಾಟಕ ಸರ್ಕಾರದ ನಿರ್ಧಾರವು ಒಂದು ರಾಷ್ಟ್ರ, ಒಂದು ಜನರ ಕಲ್ಪನೆಗೆ ವಿರುದ್ಧವಾಗಿದೆ. ಇದು ಸರ್ಕಾರದ ಸಂಕುಚಿತ ಮನೋಭಾವದ ರಾಜಕೀಯವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.

ಭಾರತವು ತನ್ನ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕೇರಳದ ಜನರ ಬಗ್ಗೆ, ವಿಶೇಷವಾಗಿ ಕಾಸರಗೋಡಿನ ಜನರ ವಿರುದ್ಧ ತಾರತಮ್ಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಹಾಕಿದ ಜನರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಬಾರದು.

ಕರ್ನಾಟಕ ಸರ್ಕಾರವು ತನ್ನ ರಾಜ್ಯದಲ್ಲಿ ಕೇರಳೀಯರು ಕೋವಿಡ್ ಹರಡುತ್ತಿದೆ ಎಂದು ತಪ್ಪು ಅಭಿಪ್ರಾಯ ಹರಡುತ್ತಿದೆ ಎಂದು ಅಶ್ರಫ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು ತನ್ನ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಕರ್ನಾಟಕದಲ್ಲಿ ಕೇರಳ ವಿರೋಧಿ ಮನೋಭಾವವನ್ನು ಸೃಷ್ಟಿಸುತ್ತಿದೆ ಎಂದು ಮಂಜೇಶ್ವರ ಶಾಸಕರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಕೇರಳದಿಂದ ಬರುವ ಜನರಿಗೆ ಆರ್ ಟಿ ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು ಕಡ್ಡಾಯಗೊಳಿಸಿದೆ

SCROLL FOR NEXT