ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಬಾಲಕಾರ್ಮಿಕರ ಕಳ್ಳಸಾಗಣೆ ಹೆಚ್ಚಳ

ಕಳೆದ ತಿಂಗಳು ರಕ್ಷಿಸಲಾದ 101 ಮಕ್ಕಳಲ್ಲಿ 56 ಮಂದಿ ಬಿಹಾರದವರಾದರೆ, 15 ಮಂದಿ ಕರ್ನಾಟಕ ಮೂಲದವರು, 12 ಮಂದಿ ಉತ್ತರಪ್ರದೇಶದವರು ಸೇರಿದ್ದಾರೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರಕ್ಕೆ ಬಾಲಕಾರ್ಮಿಕರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 101 ಮಕ್ಕಳನ್ನು ರೈಲ್ವೇ ಭದ್ರತಾ ಪಡೆ ರಕ್ಷಣೆ ಮಾಡಿದೆ. ಅವರಲ್ಲಿ 9 ಮಂದಿ ಹೆಣ್ಣುಮಕ್ಕಳು ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ನೂರರಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಮಕ್ಕಳು ಬಿಹಾರ ಮೂಲದವರು. 

ರೈಲ್ವೇ ಭದ್ರತಾ ಪಡೆಯ 'ನನ್ಹೇ ಪರಿಷ್ತೇ' ಎನ್ನುವ ಪ್ರತ್ಯೇಕ ವಿಭಾಗ, ರೈಲಿನಲ್ಲಿ ಬಾಲಾ ಕಾರ್ಮಿಕರನ್ನು ಸಾಗಣೆ ಮಾಡುವ ಬಗ್ಗೆ ತೀವ್ರ ನಿಗಾ ಇರಿಸಿದೆ. ಕಳೆದ ತಿಂಗಳು ರಕ್ಷಿಸಲಾದ 101 ಮಕ್ಕಳಲ್ಲಿ 56 ಮಂದಿ ಬಿಹಾರದವರಾದರೆ, 15 ಮಂದಿ ಕರ್ನಾಟಕ ಮೂಲದವರು, 12 ಮಂದಿ ಉತ್ತರಪ್ರದೇಶದವರು ಸೇರಿದ್ದಾರೆ.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಮಕ್ಕಳು ತಾವು ಮದರಸಾದಲ್ಲಿ ಕಲಿಯಲು ಬಂದವರು ಎಂದು ಹೇಳಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮಕ್ಕಳು ಹೇಳಿದ್ದ ಮದರಸಾಗಳು ಕೊರೊನಾ ಕಾರಣದಿಂದ ಬಂದ್ ಆಗಿರುವ ವಿಷಯ ತಿಳಿದುಬಂದಿತ್ತು.

ನಂತರ ಮಕ್ಕಳನ್ನು ತೀವ್ರವಾಗಿ ವಿಚಾರಣೆಗೆ ಗುರಿಪಡಿಸಿದಾಗ ತಮಗೆ ಒಳ್ಳೆಯ ಉದ್ಯೋಗ ಕೊಡಿಸುವ ವಾಗ್ದಾನದ ಮೇರೆಗೆ ಇಲ್ಲಿಗೆ ಕರೆದುಕೊಂಡು ಬರಲಾಗಿದೆ ಎನ್ನುವ ಸಂಗತಿಯನ್ನು ಹೊರಹಾಕಿದ್ದರು. ಅವರನ್ನು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ. 

ಮಕ್ಕಳ ಬಳಿ ಪತ್ತೆಯಾದ ಆಧಾರ್ ಕಾರ್ಡ್ ಗಳಲ್ಲಿ ಸುಳ್ಳು ಮಾಹಿತಿ ಇರುವುದು ರೈಲ್ವೇ ಅಧಿಕಾರಿಗಳನ್ನು ಆತಂಕಕ್ಕೀಡುಮಾಡಿದೆ. ಮಕ್ಕಳ ಬಳಿಯಿದ್ದ ಆಧಾರ್ ಕಾರ್ಡುಗಳಲ್ಲಿ ಅವರ ವಯಸ್ಸು 18ರಿಂದ ಮೇಲ್ಪಟ್ಟಿದೆ. ಆದರೆ ಪೊಲೀಸ್ ವಿಚಾರಣೆ ಸಂದರ್ಭ ಅವರ ವಯಸ್ಸು 18 ದಾಟದಿರುವುದು ಪತ್ತೆಯಾಗಿದೆ. ಆಧಾರ್ ಕಾರ್ಡುಗಳಲ್ಲಿ ಸುಳ್ಳು ಮಾಹಿತಿ ದಾಖಲಾಗಿರುವುದರ ಬಗ್ಗೆ ರೈಲ್ವೇ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ