ಮಂಗಳೂರು: ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವು
ರೈಲಿನಡಿಗೆ ಸಿಲುಕಿ ಇಬ್ಬರೂ ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ನಗರದ ಮಹಾಕಾಳಿ ಪಡ್ಪು ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮಂಗಳೂರು: ರೈಲಿನಡಿಗೆ ಸಿಲುಕಿ ಇಬ್ಬರೂ ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ನಗರದ ಮಹಾಕಾಳಿ ಪಡ್ಪು ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ವಸಂತಿ(50), ಪ್ರೇಮಾ (48) ಎಂದು ಗುರುತಿಸಲಾಗಿದೆ. ಈ ಮಹಿಳೆಯರು ಎಂದಿನಂತೆ ರೈಲು ಹಳಿ ದಾಟಿ ಬೀಡಿ ಕೊಡಲೆಂದು ಬೀಡಿ ಬ್ರ್ಯಾಂಚ್ಗೆ ಹೋಗುವಾಗ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಮೃತ ಮಹಿಳೆಯರಿಬ್ಬರೂ ಬೀಡಿ ಕಾರ್ಮಿಕರಾಗಿದ್ದು, ನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬೀಡಿ ಬ್ರ್ಯಾಂಚ್ ಗೆ ಬೀಡಿ ಕೊಂಡೊಯ್ಯುತ್ತಿದ್ದರು.
ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.