ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕಲಬುರಗಿಯಲ್ಲಿ ಭೂಮಿ ಕಂಪಿಸಿದ ಅನುಭವ, ಆತಂಕಗೊಂಡ ಗ್ರಾಮಸ್ಥರು

ಕಲಬುರಗಿ ಜಿಲ್ಲೆಯ ಕೆಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕಿನ ಹಲವು ಗ್ರಾಮಗಳ ನಿವಾಸಿಗಳು ಶುಕ್ರವಾರ ತಡರಾತ್ರಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 21 Aug 2021, 1:35 pm

ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕಿನ ಹಲವು ಗ್ರಾಮಗಳ ನಿವಾಸಿಗಳು ಶುಕ್ರವಾರ ತಡರಾತ್ರಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. 

ಇನ್ನು ಕೆಲವು ಮನೆಗಳು ಬಿರುಕು ಬಿಟ್ಟಿದ್ದು, ಕೊರವಿ, ಹಾಲಚೇರ, ತೆಗಲತಿಪ್ಪಿ, ವಜ್ರಗಾಂವ್, ನಾವಡಗಿ, ಚಿಂತಕುಂಟಾ ಮತ್ತು ಗಡಿಕೇಶ್ವರ ಗ್ರಾಮಸ್ಥರು ಮೂರು ಬಾರಿ ಭೂಮಿಯಿಂದ ದೊಡ್ಡ ಶಬ್ದಗಳನ್ನು ಕೇಳಿಸಿತು ಎಂದು ಹೇಳಿದ್ದಾರೆ.

"ರಾತ್ರಿ 7.29 ಕ್ಕೆ ಮೊದಲ ಬಾರಿಗೆ ಮೈದಾನದಿಂದ ಸದ್ದು ಕೇಳಿಸಿತು. ಇದು ಅತ್ಯಂತ ಜೋರಾಗಿತ್ತು, ಆದರೆ ಇತರ ಎರಡು ಶಬ್ದಗಳು ಅಷ್ಟು ದೊಡ್ಡದಾಗಿರಲಿಲ್ಲ. ಐದು ಮತ್ತು 10 ನಿಮಿಷಗಳ ಈ ಎರಡು ಶಬ್ದಗಳು ಕೇಳಿಬಂದವು ಎಂದು 
ಹಾಲ್ಚೇರಾ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಮಾಳಗೆ ಅವರು ಹೇಳಿದ್ದಾರೆ.
ಆತಂಕಗೊಂಡ ಜನ ಈಗ ತೆರೆದ ಮೈದಾನದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಏಕೆಂದರೆ ಅದು ಭೂಕಂಪ ಎಂದು ಭಾವಿಸಿದ್ದಾರೆ. 

Advertisement

Advertisement

ಕಾಳಗಿ ತಹಶೀಲ್ದಾರ್ ನಾಗನಾಥ್ ಅವರು ಈ ಸಂಬಂಧ ತಾಲ್ಲೂಕಿನ ವಿವಿಧ ಗ್ರಾಮಗಳಿಂದ 10-12 ದೂರವಾಣಿ ಕರೆಗಳನ್ನು ಸ್ವೀಕರಿಸಿದ್ದು, ಈ ಗ್ರಾಮಗಳ ಉಸ್ತುವಾರಿ ಹೊಂದಿರುವ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಗಣಿ ಇಲಾಖೆ ಉಪ ನಿರ್ದೇಶಕಿ ರೈಸ್ ಫಾತಿಮಾ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಫಾತಿಮಾ ಅವರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಹಿತಿ ನೀಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಭೂಕಂಪನವಲ್ಲ, ಏಕೆಂದರೆ ರಿಕ್ಟರ್ ಮಾಪಕದಲ್ಲಿ ಯಾವುದೇ ರೆಕಾರ್ಡಿಂಗ್ ಇಲ್ಲ. "ಸಮಸ್ಯೆಯನ್ನು ಸರಿಯಾಗಿ ಅಧ್ಯಯನ ಮಾಡಿದ ನಂತರ ನಾವು ಒಂದು ತೀರ್ಮಾನಕ್ಕೆ ಬರಬಹುದು" ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement