ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಹುಬ್ಬಳ್ಳಿಯ 'ಉಣಕಲ್' ಕೆರೆಗೆ 'ಚನ್ನಬಸವ ಸಾಗರ' ಎಂದು ನಾಮಕರಣ!

ಹುಬ್ಬಳ್ಳಿ ನಗರದ ಪ್ರಮುಖ ಸ್ಥಳಗಳಿಗೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸಿಸಿ ಇಲ್ಲಿನ ಜನರಿಗೆ ಜೀವನ ಮಾಡಲು ಮಾರ್ಗದರ್ಶನ ನೀಡಿದ್ದ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ.

ಉಣಕಲ್ ಕೆರೆ
Shilpa D
Updated On : 24 Aug 2021, 1:29 pm

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಪ್ರಮುಖ ಸ್ಥಳಗಳಿಗೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸಿಸಿ ಇಲ್ಲಿನ ಜನರಿಗೆ ಜೀವನ ಮಾಡಲು ಮಾರ್ಗದರ್ಶನ ನೀಡಿದ್ದ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು, ಈಗ ಉಣಕಲ್ ಕೆರೆಗೆ ಚನ್ನಬಸವಸಾಗರ ಎಂದು ಹೆಸರಿಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಇರುವ ಉಣಕಲ್ ಪ್ರದೇಶದಲ್ಲಿ 750 ಎಕರೆಗಳಲ್ಲಿ ಹರಡಿರುವ ಉಣಕಲ್ ಕೆರೆಯಿದ್ದು, ಅತ್ಯುತ್ತಮ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ನೂರಾರು ಜನರನ್ನು ಆಕರ್ಷಿಸುತ್ತದೆ. 

Advertisement

Advertisement

ಹಿಂದೆ, ಹುಬ್ಬಳ್ಳಿ ನಗರಕ್ಕೆ ಈ ಜಲಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು, ಮಲಪ್ರಭಾ ನದಿ ನೀರಿನ ಯೋಜನೆ ಪ್ರಾರಂಭವಾದ ನಂತರ, ಉಣಕಲ್ ಸರೋವರವನ್ನು ಪಿಕ್ನಿಕ್ ತಾಣವಾಗಿ ಅಭಿವೃದ್ಧಿ ಮಾಡಲಾಯಿತು.

ಉಳ್ಳಾವಿಗೆ ಹೋಗುವ ದಾರಿಯಲ್ಲಿ, ತತ್ವಜ್ಞಾನಿ ಬಸವಣ್ಣನ ಸೋದರಳಿಯ ಚನ್ನಬಸವಣ್ಣ, ಉಣಕಲ್ ಕೆರೆಗೆ ಭೇಟಿ ನೀಡಿ ಕೆಲವು ದಿನಗಳ ಕಾಲ ಇಲ್ಲಿಯೇ ಇದ್ದರು ಹಾಗೂ  ಆ ಪ್ರದೇಶದ ಜನರು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದರು. ಆದ್ದರಿಂದ ಕೆರೆಯ ದಂಡೆಯಲ್ಲಿ ಶ್ರೀ ಚನ್ನಬಸವ ದೇವಸ್ಥಾನವನ್ನು ನಿರ್ಮಿಸಲಾಗಿದೆ, ಅಲ್ಲಿ ಸಾವಿರಾರು ಜನರು ವಾರ್ಷಿಕ ಕಾರ್ ಉತ್ಸವದಲ್ಲಿ ಭಾಗವಹಿಸುತ್ತಾರೆ. ವರ್ಷವಿಡಿ, ದೇವಾಲಯದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಭಕ್ತರು ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯು ಕೆರೆಯಲ್ಲಿ ಕಳೆ ತೆಗೆಯುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದೆ. ಕೆರೆಯೂ ಈಗ ತನ್ನ ಸೌಂದರ್ಯವನ್ನು ಮರಳಿ ಪಡೆಯುತ್ತಿದ್ದು ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ.

ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ಹೆಸರಿಸಲು ಬಹಳ ಕಾಲದಿಂದ ಬೇಡಿಕೆಯಿತ್ತು, 2003 ರಲ್ಲಿ ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ (ಎಚ್‌ಡಿಎಂಸಿ) ತನ್ನ ಸಾಮಾನ್ಯ ಸಭೆಯಲ್ಲಿ ಕೆರೆಗೆ ಚನ್ನಬಸವಣ್ಣ ಹೆಸರಿಡುವ ನಿರ್ಣಯವನ್ನು ಅಂಗೀಕರಿಸಿತು. ಒಂದು ದಶಕದ ನಂತರವೂ ನಾಗರಿಕ ಸಂಸ್ಥೆ ಕೆರೆಗೆ ಹೆಸರಿಟ್ಟಿರಲಿಲ್ಲ.  

ಕೆರೆಗೆ ಹೆಸರಿಸಲು ಎಚ್‌ಡಿಎಂಸಿ ವಿಳಂಬ ಮಾಡಿದ್ದರಿಂದ, ನಗರದ ಕೆಲವು ಜನರು ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಕೆರೆಗೆ ಚನ್ನಬಸವ ಸಾಗರ ಎಂದು ಹೆಸರಿಸಲು ಆದೇಶಿಸಿತ್ತು. ನಾಗರಿಕ ಸಂಸ್ಥೆಗಳ ಚುನಾವಣೆಗಳ ನಂತರ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿರುವುದರಿಂದ, ಅವರು ಕೆರೆಗೆ ಮರುನಾಮಕರಣ ಮಾಡಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ, ಚುನಾವಣೆಯ ನಂತರ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement