ರಾಜ್ಯ

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಏಳು ಮಂದಿ ಸುರಕ್ಷಿತವಾಗಿ ಮಂಗಳೂರಿಗೆ ವಾಪಸ್ 

Nagaraja AB

ಮಂಗಳೂರು: ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಮಂಗಳೂರಿಗರು ಸುರಕ್ಷಿತವಾಗಿ ತಮ್ಮ ಮನೆಗೆ ಹಿಂದಿರುಗಿದ್ದಾರೆ.

ಒಂದು ವೇಳೆ ಇನ್ನು ಕೆಲವರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದರೆ ಅವರನ್ನು ಮಂಗಳೂರಿಗೆ ಕರೆತರಲು ಇಲಾಖೆ ಸಹಾಯ ಮಾಡಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಹೇಳಿದ್ದಾರೆ.

ಏಳು ಮಂದಿ ಅಫ್ಘಾನಿಸ್ತಾನದಿಂದ ಬಂದ ನಂತರ ತಮ್ಮ ಕಚೇರಿಯಲ್ಲಿ ಸಭೆ ನಂತರ ಮಾತನಾಡಿದ ಕಮೀಷನರ್, ಅಫ್ಘಾನಿಸ್ತಾನದಲ್ಲಿ ಕುಟುಂಬ ಸದಸ್ಯರು ಸಿಲುಕಿದ್ದರೆ ಅಂತರವರು ನಗರದ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ನೆರವು ನೀಡಲು ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ಮಂಗಳೂರಿನ  ಜನರು ಸಿಲುಕಿದ್ದರೆ 
ಉಮೇಶ್ ಕುಮಾರ್ ಅವರಿಗೆ ಮಾಹಿತಿ ನೀಡುತ್ತೇವೆ ಎಂದರು.

ಪ್ರಸಾದ್ ಅಂಚನ್, ದಿನೇಶ್ ರೈ, ಶ್ರವಣ್ ಅಂಚನ್, ಜಗದೀಶ್ ಪೂಜಾರಿ, ದೇಶ್ಮಂಡೆ ದೇವಿಡ್ ಡಿಸೋಜಾ, ಡೆನ್ಸಿಲ್ ಮಾಂಟೆರೋ, ಮೆಲ್ವಿನ್ ಮಾಂಟೆರೋ ಭಾರತೀಯ ವಾಯುಪಡೆ ವಿಮಾನ ಮೂಲಕ ಮಂಗಳೂರು ನಗರಕ್ಕೆ ವಾಪಸ್ಸಾದರು. 

SCROLL FOR NEXT