'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಅಂತರರಾಷ್ಟ್ರೀಯ ಸಂಬಂಧಗಳಲ್ಲಿ, ಬಹಳ ಎಚ್ಚರಿಕೆಯಿಂದ ಅಂತಹ ಆಯ್ಕೆಗಳನ್ನು ಮಾಡಲಾಗುತ್ತದೆ. ಸೂಟ್ ಧರಿಸುವುದಕ್ಕೂ, ಮಿಲಿಟರಿ ಸಮವಸ್ತ್ರ ಧರಿಸುವುದಕ್ಕೂ ಇರುವ ವ್ಯತ್ಯಾಸವನ್ನು ಅರ್ಥಪೂರ್ಣವೆಂದು ನೋಡಲಾಗುತ್ತಿದೆ.
Pakistan’s Army Chief Asim Munir received the US and Iranian delegations during the Islamabad ceasefire talks.
ಕದನ ವಿರಾಮ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕ ಮತ್ತು ಇರಾನಿನ ನಿಯೋಗಗಳನ್ನು ಬರಮಾಡಿಕೊಂಡರು.
Updated on

ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯ ಫಲಿತಾಂಶವನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ, ಟೆಹ್ರಾನ್ ಮತ್ತು ವಾಷಿಂಗ್ಟನ್ ಡಿಸಿಯ ಪ್ರತಿನಿಧಿಗಳನ್ನು ಸ್ವಾಗತಿಸುವಾಗ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ವೇಷಭೂಷಣದ ಆಯ್ಕೆಗಳು ಇದೀಗ ಭಾರಿ ಸಂಚಲನ ಮೂಡಿಸಿವೆ.

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ವಿಫಲರಾಗಿದ್ದಾರೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾದ ಗಲ್ಫ್ ಪ್ರದೇಶದಲ್ಲಿ ಶಾಂತಿಯನ್ನು ಭಂಗಗೊಳಿಸಿದೆ ಮತ್ತು ಭಾರತ ಮತ್ತು ಚೀನಾದಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಇಂಧನ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಅಮೆರಿಕದ 'ಅಸಮಂಜಸ ಬೇಡಿಕೆಗಳಿಂದಾಗಿ' ಶಾಂತಿ ಮಾತುಕತೆ ವಿಫಲವಾಯಿತು ಎಂದು ಇರಾನ್‌ನ ರಾಜ್ಯ ಮಾಧ್ಯಮ ಆರೋಪಿಸಿದೆ. ತಾತ್ಕಾಲಿಕ ಕದನ ವಿರಾಮವನ್ನು ಗೌರವಿಸುವುದನ್ನು ಮುಂದುವರಿಸಲು ಪಾಕಿಸ್ತಾನ ಎರಡೂ ದೇಶಗಳನ್ನು ಒತ್ತಾಯಿಸಿದೆ.

ಈಮಧ್ಯೆ, ಅಸಿಮ್ ಮುನೀರ್ ಅವರ ಉಡುಗೆ ತೊಡುಗೆಗಳ ಆಯ್ಕೆಗಳು ಇದೀಗ ಎಲ್ಲರ ಗಮನ ಸೆಳೆದಿವೆ. ಉಭಯ ದೇಶಗಳ ಕಡೆಯವರನ್ನು ಮಾತುಕತೆಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರೆಯಲ್ಪಡುವ ಪಾಕಿಸ್ತಾನಿ ಫೀಲ್ಡ್ ಮಾರ್ಷಲ್, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಛಿ ಸೇರಿದಂತೆ ಇರಾನ್‌ ಕಡೆಯ ನಿಯೋಗವನ್ನು ಬರಮಾಡಿಕೊಳ್ಳುವಾಗ ತಮ್ಮ ಸೇನಾ ಸಮವಸ್ತ್ರವನ್ನು ಧರಿಸಿದ್ದರು. ಅದಾದ ಕೆಲವು ಗಂಟೆಗಳ ನಂತರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಯುಎಸ್ ನಿಯೋಗವನ್ನು ಬರಮಾಡಿಕೊಳ್ಳಲು ಹೋದಾಗ ಮುನೀರ್ ಸೂಟ್‌ನಲ್ಲಿ ಕಾಣಿಸಿಕೊಂಡರು.

ಅಂತರರಾಷ್ಟ್ರೀಯ ಸಂಬಂಧಗಳಲ್ಲಿ, ಬಹಳ ಎಚ್ಚರಿಕೆಯಿಂದ ಅಂತಹ ಆಯ್ಕೆಗಳನ್ನು ಮಾಡಲಾಗುತ್ತದೆ. ಸೂಟ್ ಧರಿಸುವುದಕ್ಕೂ, ಮಿಲಿಟರಿ ಸಮವಸ್ತ್ರ ಧರಿಸುವುದಕ್ಕೂ ಇರುವ ವ್ಯತ್ಯಾಸವನ್ನು ಅರ್ಥಪೂರ್ಣವೆಂದು ನೋಡಲಾಗುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥರು ತಮ್ಮ ಬಟ್ಟೆಯ ಆಯ್ಕೆಯನ್ನು ಸಂದೇಶ ಕಳುಹಿಸಲೆಂದೇ ಬಳಸಿದ್ದಾರೆ ಎಂದು ತಜ್ಞರು ನಂಬಿದ್ದು, ಇದನ್ನು 'ಉಡುಗೆ ರಾಜತಾಂತ್ರಿಕತೆ' ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ ರಾಜಕೀಯವಾಗಿ ಮಹತ್ವದ ಮಾತುಕತೆಗೆ ಮುಂಚಿತವಾಗಿ ವಿದೇಶಿ ನಿಯೋಗಗಳನ್ನು ಸ್ವಾಗತಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬದಲಿಗೆ ಮುನೀರ್ ಹೋದರು ಎಂಬುದು ಗಮನಾರ್ಹವಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಲ್ಲಿ ಮುಂದಾಳತ್ವ ವಹಿಸಿರುವುದು ರಾಜಕೀಯ ನಾಯಕತ್ವವಲ್ಲ, ಪಾಕಿಸ್ತಾನಿ ಸೇನೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

Pakistan’s Army Chief Asim Munir received the US and Iranian delegations during the Islamabad ceasefire talks.
'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

ಎರಡು ನೋಟಗಳು, ಎರಡು ಸಂದೇಶಗಳು

ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ಇರಾನಿನ ನಿಯೋಗವನ್ನು ಮುನೀರ್ ಸ್ವಾಗತಿಸಿದಾಗ, ಅವರು ತಮ್ಮ ಫೀಲ್ಡ್ ಮಾರ್ಷಲ್ ಸಮವಸ್ತ್ರವನ್ನು ಧರಿಸಿದ್ದರು. ಈ ಮೂಲಕ ಪಾಕಿಸ್ತಾನಿ ಸೇನಾ ಮುಖ್ಯಸ್ಥರು ತಮ್ಮ ಮಿಲಿಟರಿ ಅಧಿಕಾರವನ್ನು ಪ್ರದರ್ಶಿಸಲು ಬಯಸಿದ್ದರು. ಟೆಹ್ರಾನ್ ಮತ್ತು ಇಸ್ಲಾಮಾಬಾದ್ ನಡುವಿನ ಗಡಿ ವಿವಾದಗಳ ಹಿನ್ನೆಲೆಯಲ್ಲಿ ಇದು ಮಹತ್ವದ್ದಾಗಿದೆ. ಇರಾನಿನ ನಿಯೋಗವನ್ನು ಸ್ವೀಕರಿಸುವಾಗ ಮುನೀರ್ ತಮ್ಮ ಯುದ್ಧ ಸಮವಸ್ತ್ರವನ್ನು ಧರಿಸುವುದು ಶಕ್ತಿಯ ಸಂದೇಶವಾಗಿದೆ.

ಅಮೆರಿಕದ ನಿಯೋಗವನ್ನು ಸ್ವಾಗತಿಸುವಾಗ ಮುನೀರ್, ಫಾರ್ಮಲ್ ಸೂಟ್ ಅನ್ನು ಧರಿಸಿದ್ದು ಸಮತೋಲನ ಮತ್ತು ರಾಜತಾಂತ್ರಿಕತೆಯನ್ನು ಪ್ರದರ್ಶಿಸುವ ಒಂದು ಹೆಜ್ಜೆಯಾಗಿ ನೋಡಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಮುನೀರ್ ಅವರನ್ನು 'ನೆಚ್ಚಿನ ಫೀಲ್ಡ್ ಮಾರ್ಷಲ್' ಎಂದು ಹೊಗಳಿದ್ದು, ಪಾಕಿಸ್ತಾನದ ಪ್ರಾತಿನಿಧ್ಯ ಮತ್ತು ಅವರ ಉಡುಗೆಯ ಆಯ್ಕೆಯು ಇದೀಗ ಮಹತ್ವ ಪಡೆದುಕೊಂಡಿದೆ.

Pakistan’s Army Chief Asim Munir received the US and Iranian delegations during the Islamabad ceasefire talks.
ಮಾತುಕತೆಗೂ ಮುನ್ನವೇ ಟೆಹ್ರಾನ್‌ಗೆ ದೊಡ್ಡ ಗೆಲುವು; ಫ್ರೀಜ್ ಮಾಡಲಾದ ಇರಾನ್ ಸ್ವತ್ತುಗಳ ಬಿಡುಗಡೆಗೆ ಅಮೆರಿಕ ಒಪ್ಪಿಗೆ!

ತಜ್ಞರು ಹೇಳುವುದೇನು?

ಮುನೀರ್ ಅವರ ಉಡುಗೆಯು ಇರಾನ್ ಮತ್ತು ಅಮೆರಿಕಕ್ಕೆ ವಿಭಿನ್ನ ಸಂದೇಶಗಳನ್ನು ನೀಡುತ್ತವೆ ಎಂದು ಮೇಜರ್ ಜನರಲ್ ಅಶೋಕ್ ಕುಮಾರ್ (ನಿವೃತ್ತ) NDTV ಗೆ ತಿಳಿಸಿದರು. ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಪ್ರತಿನಿಧಿಸುವುದಾಗಿ ವಾಷಿಂಗ್ಟನ್ ಡಿಸಿಗೆ ತಿಳಿಸುವುದು ಫಾರ್ಮಲ್ ಸೂಟ್ ಆಗಿದೆ. ಮತ್ತೊಂದೆಡೆ, ಇರಾನಿನ ನಿಯೋಗವನ್ನು ಬರಮಾಡಿಕೊಳ್ಳುವಾಗ ಮುನೀರ್ ತಮ್ಮ ಸೇನಾ ಸಮವಸ್ತ್ರ ಧರಿಸುವ ನಿರ್ಧಾರವು ಸದ್ಯ ನಡೆಯುತ್ತಿರುವ ಸಂಘರ್ಷದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೊರತು, ಇರಾನ್‌ನ ರಾಜಕೀಯ ನಾಯಕತ್ವವಲ್ಲ ಎಂದು ಅರ್ಥೈಸಬಹುದು. ಈ ಹಿನ್ನೆಲೆಯಲ್ಲಿ, ಮಿಲಿಟರಿ ಸಮವಸ್ತ್ರ ಧರಿಸುವುದು, ಕೇವಲ ನಿಯಮಿತ ರಾಜಕೀಯ ಅಥವಾ ರಾಜತಾಂತ್ರಿಕ ಸಭೆಯಾಗಿ ಅಲ್ಲ, ಬದಲಾಗಿ ಸಶಸ್ತ್ರ ಪಡೆಗಳ ನಡುವಿನ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಸೂಚಿಸುತ್ತದೆ ಎಂದು ಹೇಳಿದರು.

ಮಾಜಿ ರಾಜತಾಂತ್ರಿಕ ಯೋಗೇಶ್ ಗುಪ್ತಾ, ಇರಾನ್ ನಿಯೋಗವನ್ನು ಸ್ವೀಕರಿಸುವಾಗ ಮುನೀರ್ ಧರಿಸಿದ್ದ ಯುದ್ಧ ಸಮವಸ್ತ್ರವು ಅವರ ಮಿಲಿಟರಿ ಅಧಿಕಾರದ ಪ್ರತಿಪಾದನೆಯಾಗಿದೆ. ಆದರೆ, ಅಮೆರಿಕ ತಂಡವನ್ನು ಭೇಟಿಯಾದಾಗ ಅವರು ಆಯ್ಕೆ ಮಾಡಿದ ಉಡುಪನ್ನು ಇಸ್ಲಾಮಾಬಾದ್-ವಾಷಿಂಗ್ಟನ್ ಸಂಬಂಧಗಳ ಆಳವನ್ನು ಒತ್ತಿಹೇಳುವುದಾಗಿದೆ ಎಂದು ಹೇಳಿದರು.

ಮುನೀರ್ ಅವರ ವೇಷಭೂಷಣ ಆಯ್ಕೆಗಳು ಮಾತುಕತೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಆದರೆ, ಅವು ಖಂಡಿತವಾಗಿಯೂ ಇರಾನ್ ಮತ್ತು ಅಮೆರಿಕದೊಂದಿಗಿನ ಪಾಕಿಸ್ತಾನದ ಸಂಬಂಧದ ಸ್ವರೂಪದ ಬಗ್ಗೆ ಸ್ಪಷ್ಟ ಸಂದೇಶಗಳನ್ನು ರವಾನಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com