ಮಾತುಕತೆಗೂ ಮುನ್ನವೇ ಟೆಹ್ರಾನ್‌ಗೆ ದೊಡ್ಡ ಗೆಲುವು; ಫ್ರೀಜ್ ಮಾಡಲಾದ ಇರಾನ್ ಸ್ವತ್ತುಗಳ ಬಿಡುಗಡೆಗೆ ಅಮೆರಿಕ ಒಪ್ಪಿಗೆ!

ಈ ಸ್ವತ್ತುಗಳನ್ನು ಬಿಡುಗಡೆಗೊಳಿಸುವ ವಿಷಯದ ಬಗ್ಗೆ ಸದ್ಯ ಅಮೆರಿಕ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.
US President Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ದುಬೈ: ಕತಾರ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿ ತಡೆಹಿಡಿಯಲಾಗಿರುವ ಇರಾನ್‌ನ ಸ್ವತ್ತುಗಳನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆಯುವ ಮಾತುಕತೆಯ ಸಮಯದಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಇರಾನ್ ಇದನ್ನು ಸಕಾರಾತ್ಮಕ ಮತ್ತು ಗಂಭೀರ ಹೆಜ್ಜೆಯಾಗಿ ನೋಡುತ್ತದೆ ಎನ್ನಲಾಗಿದೆ.

ಈ ಆಸ್ತಿಗಳನ್ನು ಬಿಡುಗಡೆಗೊಳಿಸುವ ವಿಷಯದ ಬಗ್ಗೆ ಸದ್ಯ ಅಮೆರಿಕ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.

ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಮೂಲಗಳು, ಇರಾನ್‌ನ ಈ ಸ್ವತ್ತುಗಳನ್ನು ಬಿಡುಗಡೆಗೊಳಿಸುವುದು 'ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವುದಕ್ಕೆ ನೇರ ಸಂಬಂಧ ಹೊಂದಿದೆ' ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿನ ಮಾತುಕತೆಯಲ್ಲಿ ಇದು ಪ್ರಮುಖ ವಿಷಯವಾಗುವ ನಿರೀಕ್ಷೆಯಿದೆ.

US President Donald Trump
ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಇರಾನ್ ಮತ್ತು ಅಮೆರಿಕ ಶಾಂತಿ ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಿದ್ದು, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶನಿವಾರ ಉಭಯ ದೇಶಗಳ ಸಭೆ ನಡೆಯಲಿದೆ.

ಏಪ್ರಿಲ್ 7ರಂದು ಎರಡು ವಾರಗಳ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮಾತುಕತೆಗೆ ಮುಂದಾಗಿವೆ.

US President Donald Trump
ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com