ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

56 ವರ್ಷದ ಅವರು ತಮ್ಮ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದವರು ತಿಳಿಸಿದ್ದಾರೆ.
Mojtaba Khamenei
ಮೊಜ್ತಾಬಾ ಖಮೇನಿ
Updated on

ದುಬೈ: ತಮ್ಮ ತಂದೆ ಸಾವಿಗೀಡಾದ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮುಖ ಮತ್ತು ಕಾಲಿಗೆ ಆದ ತೀವ್ರ ಗಾಯಗಳಿಂದ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಆಪ್ತ ವಲಯದ ಮೂವರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಟೆಹ್ರಾನ್‌ನ ಮಧ್ಯದಲ್ಲಿರುವ ಸರ್ವೋಚ್ಚ ನಾಯಕನ ಮನೆ ನಡೆದ ದಾಳಿಯಲ್ಲಿ ಖಮೇನಿ ಅವರ ಮುಖ ವಿರೂಪಗೊಂಡಿತ್ತು ಮತ್ತು ಅವರ ಒಂದು ಅಥವಾ ಎರಡೂ ಕಾಲುಗಳಿಗೆ ಗಮನಾರ್ಹ ಗಾಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

56 ವರ್ಷದ ಅವರು ತಮ್ಮ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದವರು ತಿಳಿಸಿದ್ದಾರೆ. ಖಮೇನಿ ಅವರು ಆಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಯುದ್ಧ ಮತ್ತು ವಾಷಿಂಗ್ಟನ್‌ನೊಂದಿಗಿನ ಮಾತುಕತೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರಲ್ಲಿ ಇಬ್ಬರು ತಿಳಿಸಿದ್ದಾರೆ.

ದಶಕಗಳಲ್ಲಿ ಇರಾನ್ ಅತ್ಯಂತ ಗಂಭೀರ ಅಪಾಯದಲ್ಲಿರುವ ಈ ಸಮಯದಲ್ಲಿ, ಶನಿವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಆರಂಭವಾಗಲಿರುವ ಸಂದರ್ಭದಲ್ಲಿ, ಖಮೇನಿ ಅವರ ಆರೋಗ್ಯವು ಅವರಿಗೆ ಸರ್ಕಾರಿ ವ್ಯವಹಾರಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

Mojtaba Khamenei
Iran ಸರ್ವಾಧಿಕಾರಿ ಈಗ 'ಜೀವಂತ ಶವ', 'ಪ್ರಜ್ಞಾಹೀನ'; ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ: ವರದಿ

ಖಮೇನಿಯವರ ಆಪ್ತ ವಲಯಕ್ಕೆ ಹತ್ತಿರವಿರುವ ಜನರು ತಮ್ಮ ನಾಯಕನ ಸ್ಥಿತಿಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಆದರೆ, ಈ ಬಗ್ಗೆ ರಾಯಿಟರ್ಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ.

ಮಾರ್ಚ್ 8 ರಂದು ತಮ್ಮ ತಂದೆಯ ಬದಲಿಯಾಗಿ ನೇಮಕಗೊಂಡ ನಂತರ ಖಮೇನಿ ಅವರ ಯಾವುದೇ ಫೋಟೊ, ವಿಡಿಯೋ ಅಥವಾ ಆಡಿಯೋ ರೆಕಾರ್ಡಿಂಗ್ ಪ್ರಕಟವಾಗಿಲ್ಲ. ಖಮೇನಿ ಅವರು ಇರುವ ಸ್ಥಳ, ಸ್ಥಿತಿ ಮತ್ತು ಆಳುವ ಸಾಮರ್ಥ್ಯದ ಬಗ್ಗೆ ಮಾಹಿತಿ ಇನ್ನೂ ಸಾರ್ವಜನಿಕರಿಗೆ ನಿಗೂಢವಾಗಿಯೇ ಉಳಿದಿದೆ.

ಫೆಬ್ರುವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಮೊದಲ ದಿನದಂದು ಖಮೇನಿ ಗಾಯಗೊಂಡರು. ಈ ದಾಳಿಯಲ್ಲಿ ಅವರ ತಂದೆ ಮತ್ತು 1989ರಿಂದ ಇರಾನ್‌ನ ಆಡಳಿತ ನಡೆಸುತ್ತಿದ್ದ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾದರು. ಈ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಪತ್ನಿ, ಸೋದರ ಮಾವ ಮತ್ತು ನಾದಿನಿ ಸೇರಿದಂತೆ ಅವರ ಕುಟುಂಬದ ಇತರ ಸದಸ್ಯರು ಸಾವಿಗೀಡಾದರು.

ಖಮೇನಿ ಅವರ ಗಾಯಗಳ ಬಗ್ಗೆ ಇರಾನ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ, ಸರ್ಕಾರಿ ದೂರದರ್ಶನದ ಸುದ್ದಿ ವಾಚಕರೊಬ್ಬರು ಅವರನ್ನು 'ಜಾನ್‌ಬಾಜ್' ಎಂದು ಬಣ್ಣಿಸಿದ್ದಾರೆ. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಈ ಪದವನ್ನು ಬಳಸಲಾಗುತ್ತದೆ.

ಖಮೇನಿಯವರ ಗಾಯಗಳ ಕುರಿತಾದ ವರದಿಗಳು ಮಾರ್ಚ್ 13 ರಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಕ್ಕೆ ಹೋಲುತ್ತವೆ. ಅಂದರೆ, ಖಮೇನಿ ಗಾಯಗೊಂಡಿದ್ದು, ವಿರೂಪಗೊಂಡಿರಬಹುದು ಎಂದು ಅವರು ಹೇಳಿದ್ದರು.

ಖಮೇನಿ ಒಂದು ಕಾಲು ಕಳೆದುಕೊಂಡಿದ್ದಾರೆ ಎನ್ನಲಾಗಿದೆ ಎಂದು ಅಮೆರಿಕದ ಗುಪ್ತಚರ ಮಾಹಿತಿಯ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ. ಖಮೇನಿ ಅವರ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಸಿಐಎ ನಿರಾಕರಿಸಿತು. ಇಸ್ರೇಲ್ ಪ್ರಧಾನಿ ಕಚೇರಿ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com