

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷದ ನಡುವೆ ಇರಾನ್ ಜೊತೆ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಶನಿವಾರ ಇಸ್ಲಾಮಾಬಾದ್ ಆಗಮಿಸಿದ್ದು, ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಎಸ್ಕಾರ್ಟ್ ಮಾಡಿದ್ದು, ಅದರ ರೋಚಕ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇಸ್ಲಾಮಾಬಾದ್ ಬಳಿಯ ನೂರ್ ಖಾನ್ ವಾಯುನೆಲೆಯಲ್ಲಿ ಇಳಿಯುವ ಮೊದಲು ಐದು ಪಿಎಎಫ್ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನಿ ವಾಯುಪ್ರದೇಶದಲ್ಲಿ ಅಮೆರಿಕ ವಾಯುಪಡೆಯ ಬೋಯಿಂಗ್ ಸಿ-32ಎ ವಿಮಾನಕ್ಕೆ ಬೆಂಗಾವಲು ಒದಗಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಅತ್ಯುನ್ನತ ಮಟ್ಟದ ಮುಖಾಮುಖಿ ಮಾತುಕತೆ ಇಂದು ಪಾಕಿಸ್ತಾನದಲ್ಲಿ ನಡೆಯುತ್ತಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿದೆ.
ವ್ಯಾನ್ಸ್ ಅವರೊಂದಿಗೆ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ಸಹ ಆಗಮಿಸಿದ್ದಾರೆ.
Advertisement