ರಾಜ್ಯ

ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಯೋಜನೆ: ಶೀಘ್ರದಲ್ಲೇ ಟೆಂಡರ್

Manjula VN

ಬೆಂಗಳೂರು: ಬೆಂಗಳೂರು ಉಪನಗರ  ರೈಲು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ಪ್ರಥಮ ಹಂತದಲ್ಲಿ ಬೈಯಪ್ಪನಳ್ಳಿ-ಚಿಕ್ಕಬಾಣಾವರ ಕಾರಿಡಾರ್‌ ನಿರ್ಮಾಣ ಸಂಬಂಧ ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್ ಕರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

148.17 ಕಿ.ಮೀ ಉದ್ದದ 15,767 ಕೋಟಿ ರು. ಅಂದಾಜು ವೆಚ್ಚದ ಉಪ ನಗರ ರೈಲು ಯೊಜನೆಯಲ್ಲಿ ಪ್ರಮುಖವಾಗಿ 4 ಕಾರಿಡಾರ್‌ಗಳು ಬರಲಿವೆ. ಈ ಪೈಕಿ ಕೆ ರೈಡ್ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಚಿಕ್ಕಬಾಣಾವರ ಹಾಗೂ ಹೀಲಳಿಗೆ ರಾಜಾನುಕುಂಟೆ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.  

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ನಿರ್ಮಾಣ ಸಂಬಂಧ ಸಿವಿಲ್ ಕಾಮಗಾರಿಗೆ ಶೀಘ್ರದಲ್ಲೇ ಟೆಂಡರ್‌ ಅಹ್ವಾನಿಸಲು ಸಿದ್ದತೆ ನಡೆಸಲಾಗಿದೆ. ಈ ಟೆಂಡರ್‌  ಪ್ರಕ್ರಿಯೆ ಮುಗಿಸಿ ಬಳಿಕ ಹೀಲಳಿಗೆ ರಾಜಾನುಕುಂಟೆ ಕಾರಿಡಾರ್ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ದತೆ ನಡೆಸಲಾಗುತ್ತದೆ ಎಂದ ಮೂಲಗಳು ತಿಳಿಸಿವೆ. 

ಸಿವಿಲ್ ಕೆಲಸಗಳಿಗಾಗಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗದ ಕಾರಿಡಾರ್ ನಿರ್ಮಾಣ ಸಂಬಂಧ ಟೆಂಡರ್ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇದೇ ವೇಳೆ ಭೂಸ್ವಾಧೀನ ಕುರಿತು ಮಾತನಾಡಿದ ಅವರು, ಈಗಾಗಲೇ ಎರಡು ಕಾರಿಡಾರ್ ಗಳಿಗೆ ಪ್ರತ್ಯೇತ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಪ್ರತೀಯೊಂದು ಸುಮಾರು 10 ಕಿಮೀ ವಿಸ್ತೀರ್ಣವನ್ನು ಹೊಂದಿದೆ. 15 ಕಿಮೀ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮತ್ತೊಂದು ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ. ಭೂಮಿ ವಶಪಡಿಸಿಕೊಳ್ಳುವ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಹೀಲಳಿಗೆ-ಬೈಯ್ಯಪ್ಪನಹಳ್ಳಿ-ಚೆನ್ನಸಂದ್ರ-ಯಲಹಂಕ-ರಾಜನುಗುಂಟೆ ನಾಲ್ಕು ಕಾರಿಡಾರ್‌ಗಳ ಟೆಂಡರ್ ಗಳನ್ನು ಮುಂದಿನ ಎರಡು ಅಥವಾ ಮೂರು ತಿಂಗಳುಗಳಲ್ಲಿ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಕೇಂದ್ರ ಸಚಿವ ಸಂಪುಟ ಅರ್ಥಿಕ ವ್ಯವಹಾರಗಳ ಸಮಿತಿ ಸದರಿ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡುವಾಗ ನಾಲ್ಕು ಕಾರಿಡಾರ್‌ ಪೈಕಿ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ನಿರ್ದೇಶನ ನೀಡಿತ್ತು. ಇದಷ್ಟೇ ಅಲ್ಲದೆ, ಜುಲೈ ಕೊನೆಯ ವಾರದಲ್ಲಿ 7,400 ಕೋಟಿ ರೂ.ಗಳ ಬಾಹ್ಯ ಸಾಲವನ್ನು ಮುಂದುವರಿಸಲು ರಾಜ್ಯಕ್ಕೆ ಅನುಮತಿ ನೀಡಿತ್ತು.

ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ಯೋಜನೆಯು ನಗರದ ಸಬುರ್ಬನ್ ಪ್ರದೇಶಗಳನ್ನು ತಲುಪಬೇಕೆಂಬುದ್ನು ಸರ್ಕಾರ ಬಯಸಿದೆ. ಯೋಜನೆಯು ಎರಡನೇ ಹಂತದಲ್ಲಿ ಬಂಗಾರಪೇಟೆ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ರಾಮನಗರ ತಲುಪಬೇಕಿದೆ ಎಂದು ಹೇಳಿದ್ದಾರೆ. 

ಸಬ್ ಅರ್ಬನ್‌ ಯೋಜನೆಯಿಂದ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಆಗುವುದರ ಜೊತೆಗೆ ನಗರ ಹೊರವಲಯದ ಉಪನಗರ ಸಾರಿಗೆ ಸಂಪರ್ಕ ಸುಲಭವಾಗಲಿದೆ. ರೈಲ್ವೆ ಡಬಲಿಂಗ್ ಯೋಜನೆಗಳಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

SCROLL FOR NEXT