ರಾಜ್ಯ

ಆಸ್ಪತ್ರೆಗಳಲ್ಲಿ  ಅವಶ್ಯಕ‌ ಔಷಧಿ, ತಪಾಸಣಾ ಕಿಟ್  ಒದಗಿಸಲು ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿ ರಚನೆ

Nagaraja AB

ಬೆಂಗಳೂರು: ರಾಜ್ಯದ ‌ಎಲ್ಲ‌ ಆಸ್ಪತ್ರೆಗಳಲ್ಲಿ ಅವಶ್ಯಕ‌ವಿರುವ ಔಷಧಿ ಮತ್ತು‌ ಪ್ರಯೋಗಾಲಯಗಳಲ್ಲಿ ಅವಶ್ಯಕವಾಗಿರುವ ಉಪಕರಣ, ರಾಸಾಯನಿಕ ಹಾಗೂ ತಪಾಸಣಾ ಕಿಟ್ ಗಳನ್ನು ಒದಗಿಸಲು ನೇರವಾಗುವ ನಿಟ್ಟಿನಲ್ಲಿ ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕರು ಈ ಸಮಿತಿಯ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಐವರು ಸದಸ್ಯರು ಹಾಗೂ ಒಬ್ಬರು ಸದಸ್ಯ ಕಾರ್ಯದರ್ಶಿ ಇರುತ್ತಾರೆ. 

ರಾಜ್ಯದಲ್ಲಿನ ಆರೋಗ್ಯ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಇ- ಔಷಧ ಸಾಫ್ಟ್ ವೇರ್ ಮೂಲಕ ಔಷಧ ಖರೀದಿ ಮಾಡಲು ಹಾಗೂ ಈ ಔಷಧಿಗಳ ಅವಶ್ಯಕ ಬಳಕೆ ಮತ್ತು ಪ್ರಯೋಗ ಶಾಲೆಗಳಲ್ಲಿ ಅವಶ್ಯವಿರುವ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ವಿವರವನ್ನು  ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

ಈ ಮೇಲ್ವಿಚಾರಣಾ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು ಹಾಗೂ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಿ ಇ-ಔಷಧ ಸಾಫ್ಟ್ ವೇರ್ ನಲ್ಲಿ ದಾಖಲಾಗುವ ದತ್ತಾಂಶವನ್ನು ಪರಿಶೀಲಿಸುವುದು, ಜಿಲ್ಲಾವಾರು ಔಷಧ, ಪ್ರಯೋಗಶಾಲಾ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ಬೇಡಿಕೆ ಪರಿಶೀಲಿಸಿ, ನ್ಯೂನ್ಯತೆಯನ್ನು ಗುರುತಿಸಿ ಸರಿಪಡಿಸುವುದು ಮತ್ತಿತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. 

SCROLL FOR NEXT