ಸಾಂದರ್ಭಿಕ ಚಿತ್ರ 
ರಾಜ್ಯ

ಹೆಚ್ಚುತ್ತಿರುವ ಓಮಿಕ್ರಾನ್ ಆತಂಕ: ರಾಜ್ಯ ಸರ್ಕಾರಕ್ಕೆ ಐವರ ಜಿನೋಮಿಕ್ ಸೀಕ್ವೆನ್ಸ್ ವರದಿಯದ್ದೇ ಚಿಂತೆ!

ಸಾರ್ಸ್ ಕೋವಿಡ್ 2 ವೈರಸ್(SARS-CoV-2)A ಓಮಿಕ್ರಾನ್ ರೂಪಾಂತರಿ ಎರಡು ಕೊರೋನಾ ಪ್ರಕರಣಗಳು ರಾಜ್ಯದ ಬೆಂಗಳೂರಿನಲ್ಲಿ ಪತ್ತೆಯಾದ ನಂತರ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಅವರ ಜಿಮೋಮ್ ಸೀಕ್ವೆನ್ಸ್ ವರದಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

ಬೆಂಗಳೂರು: ಸಾರ್ಸ್ ಕೋವಿಡ್ 2 ವೈರಸ್(SARS-CoV-2A) ಓಮಿಕ್ರಾನ್ ರೂಪಾಂತರಿ ಎರಡು ಕೊರೋನಾ ಪ್ರಕರಣಗಳು ರಾಜ್ಯದ ಬೆಂಗಳೂರಿನಲ್ಲಿ ಪತ್ತೆಯಾದ ನಂತರ ಅವರ ಪ್ರಾಥಮಿಕ ಐವರು ಸಂಪರ್ಕಿತರ ಜಿಮೋಮ್ ಸೀಕ್ವೆನ್ಸ್ ವರದಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಇದರ ನಡುವೆ ತುರ್ತು ಕ್ರಮ ತೆಗೆದುಕೊಳ್ಳಲು ಕೇಂದ್ರೀಯ ಸಂಸ್ಥೆಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಸಮಸ್ಯೆ, ಗೊಂದಲ ಉಂಟಾಗಿದೆ.

46 ವರ್ಷದ ಓಮಿಕ್ರಾನ್ ಸೋಂಕಿತ ವೈದ್ಯರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಐದು ಮಂದಿಯ ಜಿನೋಮ್ ಸೀಕ್ವೆನ್ಸ್ ವರದಿ ಮೊನ್ನೆ ಶನಿವಾರ ಅಥವಾ ನಿನ್ನೆ ಬರಬೇಕಾಗಿತ್ತು. ವೈದ್ಯರ ಪತ್ನಿ ಮತ್ತು ಇಬ್ಬರು ಮಕ್ಕಳ ಜಿನೋಮ್ ಸೀಕ್ವೆನ್ಸ್ ವರದಿಯನ್ನು ಟೆಸ್ಟ್ ಗೆ ಲ್ಯಾಬ್ ಗೆ ಕಳುಹಿಸಲಾಗಿದೆ. ರಾಷ್ಟ್ರೀಯ ಜೀವಶಾಸ್ತ್ರ ವಿಜ್ಞಾನ(NCBS) ಸಂಸ್ಗೆಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ವರದಿಯನ್ನು ಕಳುಹಿಸಿದ್ದರು. 

ಎನ್ ಸಿಬಿಎಸ್ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದ್ದು ನಿಯಮ ಪ್ರಕಾರ, ವರದಿಯನ್ನು ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಿ ಕೇಂದ್ರ ಆರೋಗ್ಯ ಸಚಿವಾಲಯ ಮೊದಲು ತಿಳಿಸಬೇಕು. ಬಿಬಿಎಂಪಿ ಮತ್ತು ಕರ್ನಾಟಕ ಆರೋಗ್ಯಾಧಿಕಾರಿಗಳು ಕೇಂದ್ರ ಸಂಸ್ಥೆಯನ್ನು ಆದಷ್ಟು ಬೇಗನೆ ವರದಿ ನೀಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ವರದಿ ಬಂದ ತಕ್ಷಣ ಅದನ್ನು ನೋಡಿಕೊಂಡು ಮುಂದಿನ ಕ್ರಮ ತ್ವರಿತವಾಗಿ ತೆಗೆದುಕೊಳ್ಳಬಹುದು ಎಂಬುದು ಕರ್ನಾಟಕ ಆರೋಗ್ಯಾಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಆಲೋಚನೆಯಾಗಿದೆ. ಇಂದು ಎನ್ ಸಿಬಿಎಸ್ ಜಿನೋಮ್ ಸೀಕ್ವೆನ್ಸಿಂಗ್ ವರದಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವಾಲಯವೇ ಅದನ್ನು ಹಂಚಿಕೊಳ್ಳಬಹುದು. 

ಪ್ರಯೋಗಾಲಯದ ಶಿಷ್ಟಾಚಾರ ಕ್ರಮವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಕೇಂದ್ರ ಸರ್ಕಾರ ನಿಯಮ ಪಾಲಿಸಬೇಕೆಂದು ಸಂಸ್ಥೆಯ ಮೇಲೆ ಒತ್ತಡ ಹಾಕುತ್ತಿರುವುದು ನಮಗೆ ಆತಂಕಕ್ಕೀಡುಮಾಡಿದೆ. ಪ್ರಯೋಗಾಲಯಕ್ಕೆ ನಾವು ನಮಗೆ ಮೊದಲು ವರದಿ ಕೊಡಿ ಎಂದು ಕೇಳಿಕೊಂಡರೆ ಅವರು ಕೇಳುತ್ತಿಲ್ಲ, ನಾವು ಮೊದಲು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎನ್ನುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಹಿಂದೆ, ಕೋವಿಡ್ -19 ಪ್ರಕರಣಗಳು ತ್ವರಿತ ಗತಿಯಲ್ಲಿ ಹೆಚ್ಚುತ್ತಿರುವಾಗ ವರದಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವ ಮೊದಲೇ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಸಿದ್ಧತೆಗಳನ್ನು ತ್ವರಿತವಾಗಿ ಮಾಡಬಹುದಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸೌಹಾರ್ದಯುತ ಕ್ರಮ ಕೆಲಸವನ್ನು ಸುಗಮವಾಗಿ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿಯಲ್ಲಿ, ಓಮಿಕ್ರಾನ್ ರೂಪಾಂತರದ ಪ್ರಕರಣಗಳು ಈಗ ದೇಶದ ಇತರ ಭಾಗಗಳಲ್ಲಿ ಹೆಚ್ಚುತ್ತಿರುವಾಗ ಜನರ ಪ್ರಯಾಣಕ್ಕೆ ಇನ್ನೂ ಯಾವುದೇ ನಿರ್ಬಂಧಗಳಿಲ್ಲ, ಹೀಗಿರುವಾಗ ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳುವುದು ಅವಶ್ಯಕವಾಗುತ್ತದೆಯಲ್ಲವೇ ಎಂದು ಅವರು ಕೇಳುತ್ತಾರೆ.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕೋವಿಡ್ -19 ಕ್ಲಸ್ಟರ್‌ಗಳ ಸಂಖ್ಯೆ ಈಗ 75 ಕ್ಕೆ ಏರಿದ್ದು, ಬೆಂಗಳೂರಿನ ಬೊಮ್ಮನಹಳ್ಳಿ ವಲಯವು ಅವುಗಳಲ್ಲಿ ಬಹುಪಾಲು ಹೊಂದಿರುವುದರಿಂದ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದಲ್ಲಿ ಮೊದಲ ಓಮಿಕ್ರಾನ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಕೂಡ ಬೊಮ್ಮನಹಳ್ಳಿ ವಲಯದಲ್ಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT