ರಾಜ್ಯ

ಬೆಂಗಳೂರು: ಕೊತ್ತನೂರು ಕೆರೆಯಲ್ಲಿ ಗಂಗಾರತಿ

Prasad SN

ಬೆಂಗಳೂರು: ನಗರದ ಕೊತ್ತನೂರು ಕೆರೆಯಲ್ಲಿ ಕಾರ್ತಿಕ ಮಾಸದ ಕಡೆಯ ಶುಕ್ರವಾರ ಕೊತ್ತನೂರು ಕೆರೆ ಕ್ಷೇಮಾಭಿವೃದ್ಧಿ ಸಮಿತಿ ಗಂಗಾರತಿ ಆಯೋಜಿಸಿತ್ತು.

ಬಡಾವಣೆಯ ಜೀವಸೆಲೆಯಾದ ಕೆರೆಗೆ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಸುಮಾರು 18 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಈಚೆಗೆ ಅಭಿವೃದ್ಧಿಪಡಿಸಿದ್ದು, ಕಳೆದ ಕೆಲವು ದಿನಗಳಿಂದ ಬಿದ್ದ ಮಳೆಯಿಂದಾಗಿ ಈಗ ತುಂಬಿದೆ. ಈ ಸಂದರ್ಭದಲ್ಲಿ ಪ್ರಕೃತಿಯನ್ನು ಆರಾಧಿಸುವ ಹಾಗೂ ಜಲ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಗಂಗಾರತಿಯನ್ನು ಆಯೋಜಿಸಲಾಗಿತ್ತು.

ಕೆರೆಯ ಸುತ್ತ ಹಣತೆಗಳನ್ನು ಬೆಳಗುವ ಮೂಲಕ ಗಂಗಾರತಿ

ಕೆರೆಯ ಸುತ್ತ ನೂರಾರು ಹಣತೆಗಳನ್ನು ಬೆಳಗುವ ಮೂಲಕ ಬಡಾವಣೆಯ ಮಕ್ಕಳು ಗಂಗಾರತಿಗೆ ಮೆರಗು ತಂದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

SCROLL FOR NEXT