ಪ್ರೇಯಸಿ ಕಾವ್ಯ ಜೊತೆಗೆ ಹತ್ಯೆಗೀಡಾದ ಗ್ರಾಮ ಪಂಚಾಯಿತಿ ಸದಸ್ಯನ ಚಿತ್ರ 
ರಾಜ್ಯ

ಆನೇಕಲ್ ನಲ್ಲಿ ಬೆಚ್ಚಿ ಬೀಳಿಸಿದ ಜೋಡಿ ಕೊಲೆ: ಅನೈತಿಕ ಸಂಬಂಧಕ್ಕೆ ಹೆಣವಾಗಿ ಹೋದ ಗ್ರಾಮ ಪಂಚಾಯಿತಿ ಸದಸ್ಯ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಲ್ಲಿ ನಿನ್ನೆ ರಾತ್ರಿ ನಡೆದಿರುವ ಡಬಲ್ ಮರ್ಡರ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧಕ್ಕೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹೆಣವಾಗಿ ಹೋಗಿದ್ದಾನೆ.

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಲ್ಲಿ ನಿನ್ನೆ ರಾತ್ರಿ ನಡೆದಿರುವ ಡಬಲ್ ಮರ್ಡರ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧಕ್ಕೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹೆಣವಾಗಿ ಹೋಗಿದ್ದಾನೆ. ತಾಲೂಕಿನ ಚಂದಾಪುರದಲ್ಲಿ ಈ ಪ್ರಕರಣ ನಡೆದಿದ್ದು, ಪಕ್ಷವೊಂದರ ಮುಖಂಡ ಚಿಕ್ಕಹಾಗಡೆ ನಾರಾಯಣಸ್ವಾಮಿ ತನ್ನ ಪ್ರೇಯಸಿ ಕಾವ್ಯಳೊಂದಿಗೆ ಬಾಡಿಗೆ ಮನೆಯಲ್ಲಿದ್ದ ವೇಳೆ ಹತ್ಯೆ ಮಾಡಲಾಗಿದೆ. 

ಇಬ್ಬರು ಮನೆಯಲ್ಲಿದ್ದ ವೇಳೆ ರೊಚ್ಚಿಗೆದ್ದ ಕಾವ್ಯಳ ಗಂಡ ಇಬ್ಬಳನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.  ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಭಾ ಎದುರಿನ ರಸ್ತೆಯ ಪಕ್ಕದಲ್ಲಿ ಶೀಟ್​ ಮನೆಯಲ್ಲಿ ಇಬ್ಬರು ಇದ್ದರು ಎಂದು ತಿಳಿದು ಬಂದಿದೆ.

ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾರಾಯಣಸ್ವಾಮಿಯನ್ನು ಬಾಗಿಲ ಹತ್ತಿರ  ಕೊಲೆ ಮಾಡಲಾಗಿದ್ದು, ಒಳಗಡೆ ಆತನ ಪ್ರೇಯಸಿ ಕಾವ್ಯಳನ್ನ ಹತ್ಯೆ ಮಾಡಲಾಗಿದೆ.

ಅಕ್ರಮ ಸಂಬಂಧಕ್ಕಾಗಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿ ಗಣೇಶ್​, ಡಿವೈಎಸ್ಪಿ ಎಂ ಮಲ್ಲೇಶ್​​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

'ವಾರಕ್ಕೆ 72 ಗಂಟೆ ಕೆಲಸ, ಮನಸ್ಥಿತಿ ಬದಲಾಗಬೇಕು, ಪ್ರಧಾನಿ ಮೋದಿ ಆದರ್ಶ': ಚೀನಾ ಹಿಂದಿಕ್ಕಲು ಇನ್ಫೋಸಿಸ್ ನಾರಾಯಣ ಮೂರ್ತಿ '9,9,6' ಸೂತ್ರ!

'AI' ಹೇಳುವುದೆಲ್ಲವನ್ನೂ ಕುರುಡಾಗಿ ನಂಬಬೇಡಿ: Google ಮುಖ್ಯಸ್ಥ ಸುಂದರ್ ಪಿಚೈ, ಹೀಗೆ ಹೇಳಿದ್ಯಾಕೆ?

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ವಿಡಿಯೋದಲ್ಲಿ ಉಗ್ರ ಹೇಳಿದ್ದೇನು?

SCROLL FOR NEXT