ರಾಜ್ಯ

ಪೋರ್ಟಲ್ ಹ್ಯಾಕಿಂಗ್ ಪ್ರಕರಣ: ಆರೋಪಿ ಶ್ರೀಕೃಷ್ಣ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

Lingaraj Badiger

ಬೆಂಗಳೂರು: ಇ-ಪ್ರೊಕ್ಯೂರ್‌ಮೆಂಟ್ ಸೆಲ್, ಸೆಂಟರ್ ಫಾರ್ ಇ-ಗವರ್ನೆನ್ಸ್‌ನಿಂದ 11.55 ಕೋಟಿ ರೂ. ಠೇವಣಿ ಹಣವನ್ನು ಹ್ಯಾಕ್ ಮಾಡಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಇತರ 18 ಆರೋಪಿಗಳ ವಿರುದ್ಧ ಸಿಐಡಿ ಬುಧವಾರ ಚಾರ್ಜ್ ಶೀಟ್ ಸಲ್ಲಿಸಿದೆ.

ಐಪಿಸಿ ಸೆಕ್ಷನ್ 420, ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯ ಸೆಕ್ಷನ್ 43 ಮತ್ತು ಸೆಕ್ಷನ್ 66ರ ಅಡಿಯಲ್ಲಿ ಹ್ಯಾಕಿಂಗ್ ಮತ್ತು ಡೇಟಾ ಕಳ್ಳತನ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

"ಆರೋಪಿ ಶ್ರೀಕೃಷ್ಣ ಗುತ್ತಿಗೆದಾರರಾಗಿರುವ ತಮ್ಮ ಸ್ನೇಹಿತ ಮತ್ತು ಸಹ ಆರೋಪಿಯ ನಿದರ್ಶನದ ಮೇಲೆ ಸರ್ಕಾರಿ ಪೋರ್ಟಲ್ ಅನ್ನು ಹ್ಯಾಕ್ ಮಾಡಿ, 11.55 ಕೋಟಿ ರೂ.ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಆರೋಪಿಸಿದೆ.

ಏತನ್ಮಧ್ಯೆ, ಸರ್ಕಾರಿ ಪೋರ್ಟಲ್ ಹ್ಯಾಕಿಂಗ್ ಪ್ರಕರಣ ಮತ್ತು ಶ್ರೀಕೃಷ್ಣ ಪ್ರಮುಖ ಆರೋಪಿಯಾಗಿರುವ ಬಿಟ್‌ಕಾಯಿನ್ ಪ್ರಕರಣದ ತನಿಖೆಯ ವಿವರಗಳನ್ನು ಹಂಚಿಕೊಳ್ಳುವಂತೆ ಜಾರಿ ನಿರ್ದೇಶನಾಲಯ(ಇಡಿ) ಸಿಐಡಿ ಮತ್ತು ಕೇಂದ್ರ ಅಪರಾಧ ವಿಭಾಗಕ್ಕೆ(ಸಿಸಿಬಿ) ಪತ್ರ ಬರೆದಿದೆ ಎಂದು ಹೇಳಲಾಗಿದೆ. 

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯ ಆರೋಪಿ ಶ್ರೀಕೃಷ್ಣನಿಂದ 1.44 ಕೋಟಿ ರೂಪಾಯಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

SCROLL FOR NEXT