ರಾಜ್ಯ

ವಾರಸುದಾರರಿಗೆ ವಾಹನ ನಷ್ಟದ ಪರಿಹಾರ ಮೊತ್ತ ಕೊಡಿ: ವಿಮಾ ಕಂಪೆನಿಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ

Sumana Upadhyaya

ಬೆಂಗಳೂರು: ಮೂಲ ವಾಹನ ಮಾಲೀಕರು ಮರಣ ಹೊಂದಿದಾಗ, ವಿಮಾ ಪಾಲಿಸಿಯಲ್ಲಿ ನಾಮಿನಿ ಎಂದು ಹೆಸರಿಸಲಾದ ಕಾನೂನು ಉತ್ತರಾಧಿಕಾರಿಯು ವಾಹನದ ನಷ್ಟದ ಹಾನಿಯ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು(CDRC) ತೀರ್ಪು ನೀಡಿದೆ.

ಮೃತ ಎ ನಾರಾಯಣ ಅವರ ಕಾನೂನು ವಾರಸುದಾರರಲ್ಲಿ ಒಬ್ಬರು ದೂರು ನೀಡಿದ್ದು, ನಾರಾಯಣ್ ಅವರು ಟ್ರೈಡೆಂಟ್ ಹ್ಯುಂಡೈ ಮೂಲಕ ತಮ್ಮ ಕಾರಿಗೆ ವಿಮೆ ಮಾಡಿಸಿದ್ದರು. ಅವರ ಮರಣದ ನಂತರದ ಪ್ರೀಮಿಯಂ ಅನ್ನು ಮೊತ್ತದ ನೊಟೀಸ್ ವಾರಸುದಾರರಿಗೆ ಬಂದಿತ್ತು. ಅವರು ಏಪ್ರಿಲ್ 4, 2018 ರಿಂದ ಏಪ್ರಿಲ್ 3, 2019 ರ ಅವಧಿಗೆ ಪಾಲಿಸಿ ನೀಡಿದ್ದಾರೆ. ದೂರುದಾರರನ್ನು ವಿಮೆದಾರರೆಂದು ನಮೂದಿಸದಿದ್ದರೂ, ಅವರ ಹೆಸರನ್ನು ನಾಮಿನಿ ಎಂದು ನಮೂದಿಸಲಾಗಿದೆ. ಆದ್ದರಿಂದ, ದೂರುದಾರರು ಘಟನೆಯ ದಿನಾಂಕದ ಮೇಲೆ ವಿಮೆ ಮಾಡಿಸುವ ಆಸಕ್ತಿಯನ್ನು ಹೊಂದಿದ್ದರು ಎಂದು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹೇಳಿದೆ.

ಹೆಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ನ ವಿರುದ್ಧ ಹೊಂಗಸಂದ್ರದ ನಿತಿನ್ ನಾರಾಯಣ ಎಂಬುವವರಿಗೆ ದೂರು ಸಲ್ಲಿಸಲು ಅನುವು ಮಾಡಿಕೊಟ್ಟ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ವಾಹನ ಸಂಪೂರ್ಣವಾಗಿ ಸುಟ್ಟು ಹೋಗಿದ್ದರೂ ವಿಮಾ ಕಂಪೆನಿ ಭರವಸೆ ನೀಡಿದ್ದ ಮೊತ್ತವನ್ನು ಪಾವತಿ ಮಾಡಲು ನಿರಾಕರಿಸಿತ್ತು. ಇದು ಸೇವೆಯ ಅದಕ್ಷತೆಗೆ ಕಾರಣವಾಗಿದೆ. ಹೀಗಾಗಿ ವಿಮಾ ಕಂಪೆನಿ 5.61 ಲಕ್ಷ ರೂಪಾಯಿಗಳ ಜೊತೆಗೆ 50 ಸಾವಿರ ರೂಪಾಯಿಗಳ ಪರಿಹಾರ ಮೊತ್ತವನ್ನು ಹಾಗೂ ವ್ಯಾಜ್ಯ ಖರ್ಚುವೆಚ್ಚವಾಗಿ 5 ಸಾವಿರ ರೂಪಾಯಿಗಳನ್ನು ನಿತಿನ್ ನಾರಾಯಣ ಅವರಿಗೆ ನೀಡಬೇಕೆಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿತು.

SCROLL FOR NEXT