ಕೆಪಿಎಸ್ ಸಿ 
ರಾಜ್ಯ

ರೈಲು ವಿಳಂಬ: ಮರು ಪರೀಕ್ಷೆ ಬಗ್ಗೆ 200 ಅಭ್ಯರ್ಥಿಗಳಿಗೆ ಇನ್ನೂ ಖಚಿತಪಡಿಸದ ಕೆಪಿಎಸ್ ಸಿ

ರೈಲು ವಿಳಂಬದಿಂದಾಗಿ ಡಿಸೆಂಬರ್ 14 ರಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ನಡೆಸಿದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ಗಳ ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ...

ಬೆಂಗಳೂರು: ರೈಲು ವಿಳಂಬದಿಂದಾಗಿ ಡಿಸೆಂಬರ್ 14 ರಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ನಡೆಸಿದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ಗಳ ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲು ಎರಡನೇ ಅವಕಾಶ ಸಿಕ್ಕಿದೆ. ಆದರೆ ಇತರ ಎರಡು ರೈಲುಗಳಲ್ಲಿ ದೂರದ ಸ್ಥಳಗಳಿಂದ ಬೆಂಗಳೂರಿಗೆ ಬಂದು ಇದೇ ರೀತಿಯ ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಸುಮಾರು 200 ಇತರ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಕೆಪಿಎಸ್ ಇ ಇನ್ನೂ ತಿಳಿಸಿಲ್ಲ.

ಈ ಅಭ್ಯರ್ಥಿಗಳು ಕಲಬುರಗಿ, ಬೀದರ್, ರಾಯಚೂರು ಮತ್ತು ಸೇಡಂ ಕಡೆಯಿಂದ ಎರಡು ರೈಲುಗಳಲ್ಲಿ ನಗರಕ್ಕೆ ಬಂದಿದ್ದರು. ಆದರೆ ಯಶವಂತಪುರ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಗಳಲ್ಲಿ ತಡವಾಗಿ ಬಂದಿಳಿದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. 

ಅಂದು ಯಶವಂತಪುರಕ್ಕೆ ಬೆಳಗ್ಗೆ 7.50ಕ್ಕೆ ಆಗಮಿಸಬೇಕಿತ್ತ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 11.05 ಕ್ಕೆ ಆಗಮಿಸಿತ್ತು. ಇದರಲ್ಲಿ ಬೀದರ್‌ನಿಂದ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಸಚಿನ್ ಸೇರಿದಂತೆ ಸುಮಾರು 120 ಕೆಪಿಎಸ್‌ಸಿ ಅಭ್ಯರ್ಥಿಗಳು ಇದ್ದರು.

ಯಶವಂತಪುರ ತಲುಪಿದ ನಂತರ ಅಭ್ಯರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಧಾವಿಸಿದರು. “ನನ್ನ ಪರೀಕ್ಷಾ ಕೇಂದ್ರವು ಶೇಷಾದ್ರಿಪುರಂನ ಪಿಯು ಕಾಲೇಜಿನಲ್ಲಿತ್ತು. ಮೊದಲ ಪರೀಕ್ಷೆ ಮುಗಿದ ನಂತರ ನಾನು ಪರೀಕ್ಷಾ ಕೇಂದ್ರ ತಲುಪಿದೆ ಮತ್ತು ನಾನು ಎರಡನೇ ಪತ್ರಿಕೆಯನ್ನು ಮಾತ್ರ ಬರೆದೆ. ಮೊದಲ ಪತ್ರಿಕೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ” ಎಂದು ಸಚಿನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬೆಂಗಳೂರು ಅಭ್ಯರ್ಥಿಗಳಿಗೆ ಎರಡನೇ ಅವಕಾಶ ನೀಡಲಾಗಿದೆ. ನಮಗೇಕೆ ಇಲ್ಲ? ಈ ಪರೀಕ್ಷೆ 2018 ರಿಂದ ಎರಡು ಬಾರಿ ರದ್ದುಗೊಂಡಿದ್ದರಿಂದ ಈ ಕೆಲಸ ನಮಗೆ ತುಂಬಾ ಮುಖ್ಯವಾಗಿದೆ. ಕೆಎಸ್‌ಆರ್ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಹೋಗುವ ಉದ್ಯಾನ್ ಎಕ್ಸ್‌ಪ್ರೆಸ್(11302) ರೈಲಿನ ಅಭ್ಯರ್ಥಿಗಳಿಗೆ ಕೆಪಿಎಸ್ ಸಿ ಈಗಾಗಲೇ ಹೊಸ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಆದರೆ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಮಿಸಿದ ಅಭ್ಯರ್ಥಿಗಳಿಗೆ ಇನ್ನೂ ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ ಎಂದಿದ್ದಾರೆ.

ಇನ್ನೂ ಈ ಬಗ್ಗೆ ನಮ್ಮ ವರದಿಗಾರರು ಕೆಪಿಎಸ್‌ಸಿ ಕಾರ್ಯದರ್ಶಿ ಜಿ ಸತ್ಯವತಿ ಅವರನ್ನು ಪ್ರಶ್ನಿಸಿದ್ದು, “ನೀವು ಅವರ ವಕ್ತಾರರ ಪಾತ್ರ ಏಕೆ ನಿರ್ವಹಿಸುತ್ತಿದ್ದೀರಿ? ಅಭ್ಯರ್ಥಿಗಳು ನಮ್ಮ ಬಳಿಗೆ ಬರಲಿ. ನಾವು ಅವರ ಪ್ರತಿಯೊಂದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT