ಬೆಲ್ಜಿಯನ್ ಮಾಲಿನೋಯಿಸ್ ತಳಿ ಶ್ವಾನಗಳು 
ರಾಜ್ಯ

ಬೆಂಗಳೂರು ಏರ್ ಪೋರ್ಟ್ ಭದ್ರತೆ: ಸಿಐಎಸ್ ಎಫ್ ಸೇರಲು ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳು ಸಜ್ಜು

ಇತ್ತೀಚಿಗೆ ತರಬೇತಿ ಪೂರ್ಣಗೊಳಿಸಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಸೂಪರ್ ಪರಿಣಾಮಕಾರಿ ಮತ್ತು ಅಸಾಧಾರಣ ಬುದ್ಧಿವಂತ ಶ್ವಾನಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸೇರಲು ಸಜ್ಜಾಗಿವೆ.

ಬೆಂಗಳೂರು: ಇತ್ತೀಚಿಗೆ ತರಬೇತಿ ಪೂರ್ಣಗೊಳಿಸಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಸೂಪರ್ ಪರಿಣಾಮಕಾರಿ ಮತ್ತು ಅಸಾಧಾರಣ ಬುದ್ಧಿವಂತ ಶ್ವಾನಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸೇರಲು ಸಜ್ಜಾಗಿವೆ. ದೇಶದಲ್ಲಿ ಈ ತಳಿಯ ಶ್ವಾನಗಳನ್ನು ಭದ್ರತೆಗಾಗಿ ಆಯೋಜಿಸಿರುವ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಆಗಲಿದೆ. 

ಸಿಐಎಸ್ ಎಫ್ ಮೂಲಗಳ ಪ್ರಕಾರ, ಐದು ಹೆಣ್ಣು ಶ್ವಾನಗಳಾಗಿದ್ದು, ಅವುಗಳಿಗೆ ವಿಶೇಷವಾಗಿ ಸ್ಫೋಟಕ ನಾಶ ಕುರಿತಂತೆ ತರಬೇತಿ ನೀಡಲಾಗಿದೆ. ಅವುಗಳನ್ನು ಏರ್ ಪೋರ್ಟ್ ಸೆಕ್ಯೂರಿಟಿ ಗ್ರೂಪ್ ಯೂನಿಟ್ ಸಿಐಎಸ್ ಎಫ್ ತನ್ನ ಕೆ-9 ಶ್ವಾನಪಡೆಯಲ್ಲಿ ಸೇರ್ಪಡೆ ಮಾಡುತ್ತಿದೆ. ಆರು ಮಾಲಿನೋಯಿಸ್ ಸೇರ್ಪಡೆಯೊಂದಿಗೆ ನಮ್ಮ 15 ಪ್ರಬಲ ಶ್ವಾನ ಪಡೆಗಳಲ್ಲಿ ಏಳು ಬೆಲ್ಜಿಯನ್ ತಳಿಯ ಶ್ವಾನಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತರಳುವಿನ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ತರಬೇತಿ ಶಾಲೆಯಲ್ಲಿ ಗ್ರೇಸಿ, ಲೈಕಾ, ಲಿಲಿ, ರಾಂಬೊ, ಡೈಸಿ ಮತ್ತು ಬೆಲ್ಲಾ ತರಬೇತಿ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಸಿಐಎಸ್ ಎಫ್ ಶ್ವಾನ ತಂಡ ಲ್ಯಾಬ್ರಡಾರ್‌ಗಳು, ಜರ್ಮನ್ ಶೆಫರ್ಡ್ಸ್, ಗೋಲ್ಡನ್ ರಿಟ್ರೈವರ್ಸ್, ಕಾಕರ್ ಸ್ಪೈನಿಯೆಲ್ ಮತ್ತು ಒಂದು ಮಲಿನೋಯಿಸ್  ತಳಿಯ ಶ್ವಾನಗಳನ್ನು ಒಳಗೊಂಡಿದೆ.

2011 ಮೇ 2ರಲ್ಲಿ ಪಾಕಿಸ್ತಾನದಲ್ಲಿ ಮಾಜಿ ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್  ಅವರನ್ನು ಪತ್ತೆ ಹಚ್ಚಿ ಹತ್ಯೆ ಮಾಡುವಲ್ಲಿ ಬೆಲ್ಜಿಯನ್ ಮಾಲಿನೋಯಿಸ್  ತಳಿಯ ಶ್ವಾನವೊಂದು ಅಮೆರಿಕ ನೌಕಪಡೆಗೆ ನೆರವಾಗಿತ್ತು. ಮತ್ತೊಂದು ಶ್ವಾನ ಕೋನಾನ್, ಅಕ್ಟೋಬರ್ 27,2019ರಲ್ಲಿ ಸಿರಿಯಾದಲ್ಲಿ ಐಸಿಸ್ ಮುಖಂಡ ಅಬು ಬಕರ್ ಅಲ್ ಬಗ್ದಾದಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 

ಬಾಂಬ್ ಪತ್ತೆ ಹಚ್ಚಲು ಹಾಗೂ ಸ್ಫೋಟಕಗಳ ನಾಶ ಕಾರ್ಯದಲ್ಲೂ ಈ ಶ್ವಾನಗಳು ಹೆಸರುವಾಸಿಯಾಗಿವೆ. ಸವಾಲಿನ ಪರಿಸ್ಥಿತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ. ಈ ಶ್ವಾನಗಳು ಡಿಸೆಂಬರ್ 16 ರಂದು ತರಬೇತಿ ಪೂರ್ಣಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿ: ನವರಾತ್ರಿ ವೇಳೆ ಮಹಿಳೆಯೊಬ್ಬರ ಸಂಭ್ರಮಕ್ಕೆ ಯೋಜನೆ ಕಾರಣವಾಗಿರುವುದು ಸಾರ್ಥಕ ತರಿಸಿದೆ ಎಂದ ಸಿಎಂ

SCROLL FOR NEXT