ಸಾಂದರ್ಭಿಕ ಚಿತ್ರ 
ರಾಜ್ಯ

ಮತಾಂತರ ನಿಷೇಧ ಮಸೂದೆ: ಮುಂದಿನ ಕ್ರಮ ಕುರಿತು ಚರ್ಚಿಸಲು ಶೀಘ್ರದಲ್ಲೇ ಬಿಷಪ್ ಗಳ ಸಭೆ

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ತಯಾರಿ ನಡೆಸುತ್ತಿರುವಾಗ, ಇದು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿದೆ ಎಂದು ಭಾವಿಸಿರುವ ರಾಜ್ಯದ 14 ಬಿಷಪ್‌ಗಳ ಗುಂಪು ಶೀಘ್ರದಲ್ಲೇ ಸಭೆ ಸೇರಿ ಶಾಸನದ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ.

ಮೈಸೂರು: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ತಯಾರಿ ನಡೆಸುತ್ತಿರುವಾಗ, ಇದು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿದೆ ಎಂದು ಭಾವಿಸಿರುವ ರಾಜ್ಯದ 14 ಬಿಷಪ್‌ಗಳ ಗುಂಪು ಶೀಘ್ರದಲ್ಲೇ ಸಭೆ ಸೇರಿ ಶಾಸನದ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ.

ವಿಧೇಯಕಕ್ಕೆ ಹೆದರುವುದಿಲ್ಲ, ಏಕೆಂದರೆ ಕ್ರಿಶ್ಚಿಯನ್ನರು ಎಂದಿಗೂ ಮತಾಂತರದಲ್ಲಿ ತೊಡಗಿಲ್ಲ. ಮೈಸೂರು ಧರ್ಮಪ್ರಾಂತ್ಯವು 150 ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದೆ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತದೆ. "ನಾವು ಕೋವಿಡ್ ಸಮಯದಲ್ಲಿ ಸಾಕಷ್ಟು ಸೇವೆಯನ್ನು ಮಾಡಿದ್ದೇವೆ, ಆದರೆ ನಾವು ಮತಾಂತರಗೊಳ್ಳಲು ಯಾರಿಗೂ ಆಮಿಷವೊಡ್ಡಿಲ್ಲ ಎಂದು ಮೈಸೂರು ಬಿಷಪ್ ರೆವರೆಂಡ್ ಫೆಡ್ರಿಕ್ ವಿಲಿಯಂ ಹೇಳಿದರು. 

ಕೆಲ ವ್ಯಕ್ತಿಗಳು ಆಧಾರ ರಹಿತ ಆರೋಪ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಬಲವಂತವಾಗಿ ಮತಾಂತರಕ್ಕೆ ಒಳಗಾದವರನ್ನು ಶಿಕ್ಷಿಸಲು ಈಗಾಗಲೇ ಅವಕಾಶವಿರುವುದರಿಂದ ಅಂತಹ ಕಾನೂನಿನ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದರೆ ಮುಂದಿನ ಕ್ರಮದ ಕುರಿತು ಚರ್ಚಿಸಲು ಬಿಷಪ್‌ಗಳ ಗುಂಪು ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ಅವರು ಹೇಳಿದರು. 

ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ ಅವರು, ಯಾವುದೇ ಸರ್ಕಾರ ಅದರ ವಿರುದ್ಧ ಹೋಗಬಾರದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ