ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ 
ರಾಜ್ಯ

2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ನಿಷೇಧ ಮಸೂದೆ ಸಿದ್ಧಪಡಿಸಲಾಗಿತ್ತು: ಕಾನೂನು ಸಚಿವ ಮಾಧುಸ್ವಾಮಿ

2016ರಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ಕೇಳಿ ಕಾನೂನು ಆಯೋಗ ಒಂದು ಮಸೂದೆಯನ್ನು ಸಿದ್ದಪಡಿಸಿತ್ತು. ಆ ಮಸೂದೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ತಂದು ಸ್ಕ್ರುಟಿನಿಯಾಗಿ ಆಕಸ್ಮಿಕವಾಗಿ ಸಚಿವ ಸಂಪುಟ ಮುಂದೆ ಹೋಗಿರಲಿಲ್ಲ.

ಬೆಳಗಾವಿ: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದ್ದಾಗಲೇ ಲಾ ಕಮೀಷನ್‌ ಒಂದು ಕರಡು ಮಸೂದೆ ಸಿದ್ಧಗೊಳಿಸುತ್ತಾರೆ  ಅದರಲ್ಲಿ ಈಗ ತರಲು ಉದ್ದೇಶಿರುವ ಮತಾಂತರ ನಿಷೇಧ ಮಸೂದೆಯ ಬಹುತೇಕ ಅಂಶಗಳು ಇದ್ದವು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಪ್ರತಿಪಾದಿಸಿದರು.

ಅವರಿಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಆರಂಭಿಕವಾಗಿ  ಕರ್ನಾಟಕ ಕಾನೂನು ಕಮಿಷನ್ ಸಿದ್ಕಧಪಡಿಸಿದ ಕರಡಿನಲ್ಲಿದ್ದ  ವಿಷಯಗಳ ಜೊತೆಗೆ ಪೂರಕವಾಗಿ ಎರಡ್ಮೂರು ಅಂಶಗಳನ್ನು ಬಿಜೆಪಿ ಸರ್ಕಾರ ಸೇರಿಸಿದೆ. ಈ ಬಿಲ್ ಅಸಂವಿಧಾನಿಕ ಅಂತಾ ಹೇಳಲು ಆಗಲ್ಲ.  ಬಲವಂತದ ಮತಾಂತರದಿಂದಾಗಿ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಇದನ್ನು ನಿಗ್ರಹಿಸಬೇಕಾಗಿದೆ. ಸಂವಿಧಾನದಲ್ಲಿ ಬಲವಂತ, ಆಮಿಷ, ಅಕ್ರಮ, ಯಾವುದೇ ಧರ್ಮವನ್ನು ಅವಹೇಳ ಮಾಡಬಾರದೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ,  ಈ  ತಪ್ಪಿಗೆ ಶಿಕ್ಷೆಗಳ ಬಗ್ಗೆ ಸರ್ಕಾರ ಕ್ರಮಕೈಗೊಂಡಿರಲಿಲ್ಲ. ಯಾವುದೇ ವ್ಯಕ್ತಿ ಮತಾಂತರವಾಗಬೇಕಾದರೆ ಸ್ವತಂತ್ರನಾಗಿರಬೇಕು. ಆತ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡಿರಬಾರದು. ಇದರಿಂದ ಸಮಾಜದಲ್ಲಿ ಘರ್ಷಣೆ, ತಿಕ್ಕಾಟವಾಗಬಾರದು. ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ಸೇರಬಹುದು, ಆರಾಧಿಸಬಹುದು. ಮತಾಂತರ ಬಲವಂತದಿಂದಾಗಿ ಆಗಿದ್ಯಾ ಇಲ್ಲವಾ ಅನ್ನೋದು ಬೇಕು. ಬಲವಂತದಿಂದ ಮತಾಂತರ ಆದರೆ, ಅದಕ್ಕೆ ಏನು ಮಾಡಬೇಕು ಅನ್ನೋದರ ಬಗ್ಗೆ ಈ ಬಿಲ್ ನಲ್ಲಿ  ಅಂಶಗಳನ್ನು ಅಡಕ ಮಾಡಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಈ ಬಿಲ್ ಆರಂಭಗೊಂಡಿತ್ತು ಅನ್ನೋ ಮಾತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮತ್ತೆ ಮಾತನಾಡಿದ ಮಾಧುಸ್ವಾಮಿ ಅವರು  ಕರ್ನಾಟಕ ಕಾನೂನು ಕಮಿಷನ್ ನಲ್ಲಿ ಸದಸ್ಯರು ಹಾಗೂ ಎಜಿ ಮುಂದೆ ಈ ಡ್ರಾಫ್ಟ್ ಬಿಲ್ ಸಿದ್ಧಗೊಂಡು ಸ್ಪೂಟ್ನಿ ಆಗಿತ್ತು. ಈ ಬಗ್ಗೆ ನನ್ನ ಬಳಿ ಆಗಿನ ಸರ್ಕಾರ ಸ್ಪೂಟ್ನಿ ಮಾಡಿರುವ ದಾಖಲಾತಿ ಇದೆ ಎಂದು ಹೆಚ್ಚಿನ ಮಾಹಿತಿ ನೀಡಿದರು. ಈಗಿನ ಸರ್ಕಾರ ಸಂವಿಧಾನದ ಚೌಕಟ್ಟಿನೊಳಗೆ ಮತಾಂತರ ನಿಷೇಧ ಮಸೂದೆ ತರಲು ಹೊರಟಿದೆ.  ಇದು ಯಾವುದೇ ರೀತಿಯ ಅಸಂವಿಧಾನಿಕ ಅಂಶಗಳನ್ನು ಹೊಂದಿಲ್ಲ. ಬಲವಂತದಿಂದಾಗುವ ಮತಾಂತರವನ್ನು ತಡೆಯುವುದು ಹಾಗೂ ಶಿಕ್ಷೆಗೆ ಗುರಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಶೀಲನೆಗೆ ಸೂಚಿಸಿರುವ ದಾಖಲೆ ತೋರಿಸುವಂತೆ ಪಟ್ಟು ಹಿಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT