ಸಿದ್ದರಾಮಯ್ಯ 
ರಾಜ್ಯ

ವಯಸ್ಸಿಗೂ ಪ್ರೀತಿಗೂ ಸಂಬಂಧವಿದೆಯೇ? ವಿಧಾನಸಭೆ ಕಲಾಪದಲ್ಲಿ ಸ್ವಾರಸ್ಯಕರ ಚರ್ಚೆ!

ವಯಸ್ಸಿಗೂ ಪ್ರೀತಿಗೂ ಸಂಬಂಧವಿದೆಯೇ ? ಇಂಥದ್ದೊಂದು ಸ್ವಾರಸ್ಯಕರ ಪ್ರಶ್ನೆ ಇಂದು ವಿಧಾನಸಭೆ ಕಲಾಪ ನಡೆಯುತ್ತಿರುವಾಗ ಮೂಡಿತು, ಈ ಸಂದರ್ಭದಲ್ಲಿ ಸದನ ಕ್ಷಣಕಾಲ ನಗೆಗಡಲಿನಲ್ಲಿ ತೇಲಿತು.

ಬೆಳಗಾವಿ: ವಯಸ್ಸಿಗೂ ಪ್ರೀತಿಗೂ ಸಂಬಂಧವಿದೆಯೇ? ಇಂಥದ್ದೊಂದು ಸ್ವಾರಸ್ಯಕರ ಪ್ರಶ್ನೆ ಇಂದು ವಿಧಾನಸಭೆ ಕಲಾಪ ನಡೆಯುತ್ತಿರುವಾಗ ಮೂಡಿತು, ಈ ಸಂದರ್ಭದಲ್ಲಿ ಸದನ ಕ್ಷಣಕಾಲ ನಗೆಗಡಲಿನಲ್ಲಿ ತೇಲಿತು.

ಬಲವಂತದ ಮತಾಂತರ ನಿಷೇಧ ಮಸೂದೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಉದಾಹರಣೆ ನೀಡುವಾಗ ಮಾತಿನ ಭರದಲ್ಲಿ ಬಲವಂತದ ಮತಾಂತರ ಅನ್ನೋದು ಮದುವೆಗೆ ಸಂಬಂಧಿಸಿರಲಿಲ್ಲ

ನಾನು ಲವ್ ಮಾಡಿ ಒಬ್ಬರನ್ನು ಮದುವೆ ಆಗುತ್ತೇನೆ ಎಂದು ಉದಾಹರಣೆ ಮೂಲಕ ಉತ್ತರಿಸಲು ಸಿದ್ದರಾಮಯ್ಯ ಆರಂಭಿಸಿದಾಗ ಇಡೀ ಸದನ ನಗಲು ಆರಂಭಿಸಿತು. ಆಗ ಸದಸ್ಯರ ನಗುವಿಗೆ ತಮ್ಮ ಮಾತನ್ನು ಸರಿಪಡಿಸಿಕೊಂಡು ಮಾತನಾಡಿದ ಸಿದ್ದರಾಮಯ್ಯ ಯಾವುದೋ ಒಂದು ಹುಡುಗ ಹುಡುಗಿಯನ್ನು ಪ್ರೀತಿಸಿ ಮದುವೆಯಾದಾಗ ಎಂದು ತಿದ್ದಿಕೊಂಡರು

ಆಗ ಸಭಾಧ್ಯಕ್ಷರು, ವಯಸ್ಸಿಗೂ ಮತ್ತು ಪ್ರೀತಿಗೂ ಆಂತರಿಕ ಸಂಬಂಧ ಇಲ್ಲವೇ ಎಂದು ಪ್ರಶ್ನೆ ಮಾಡಿದರು. ಆಗ, ಸಿದ್ದರಾಮಯ್ಯ ಇಲ್ಲ, ಪ್ರೀತಿ ಹಾಗೂ ಮದುವೆ ಎರಡು ಬೇರೆ ಬೇರೆ ಎಂದು ಹೇಳಿದರು. ಯಾವ ವಯಸ್ಸಲ್ಲಾದ್ರೂ ಪ್ರೀತಿ ಮಾಡಬಹುದು ಎಂದು ಹೇಳಿದರು.

ಆಗ ವಿರೋಧ ಪಕ್ಷದ ನಾಯಕರೇ ನಿಮಗೆ ವಯಸ್ಸಾಗಿದೆ ಎಂದು ಹೇಳಿದವರು ಯಾರು? ನಿಮ್ಮ ಮನೆಯವರು ಹೇಳಿಲ್ಲ ತಾನೇ ಎಂದು ಸಚಿವ  ಈಶ್ವರಪ್ಪ ಹಾಸ್ಯ ಮಾಡಿದರು. ಆಗ ಸಿದ್ದರಾಮಯ್ಯ ಇಲ್ಲ,  ನಮ್ಮ ಮನೆಯವರು ಹೇಳಿಲ್ಲ.  ನಾನೇ ಅನ್ಕೊಂಡಿದ್ದೇನೆ. ನಿನಗೇನಾದ್ರೂ ಅನ್ಸಿದಿಯಾ ಎಂದು ಈಶ್ವರಪ್ಪಗೆ ಮರಳಿ ಪ್ರಶ್ನೆ ಮಾಡಿದ್ರು. ಯಾವುದೇ ಕಾರಣಕ್ಕೂ ನನಗೆ ಅನಿಸಿಲ್ಲ ಎಂದು ಈಶ್ವರಪ್ಪ ಹೇಳಿದರು. ವಯಸ್ಸು ಯಾವಾಗಲೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ

ಒಬ್ಬ ಹುಡುಗ ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಇದನ್ನು ಸಂವಿಧಾನದ ಆರ್ಟಿಕಲ್ 21 ಮತ್ತು 25 ಅನುಮತಿಸಿದೆ. ಇದಕ್ಕೆ ಅಡ್ಡಿ ಬರಲು ಯಾರು ನೀವು?  ಇದನ್ನೇ ಗುಜರಾತ್ ನಲ್ಲಿ ಕೋರ್ಟ್‌ ಪ್ರಶ್ನೆ ಮಾಡಿ ಗುಜರಾತ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಹೇಳಿದರು. ಇದು ಪ್ರೀತಿಸುವವರ ಹಕ್ಕು. ನಾವು ಯಾರು ಪ್ರಶ್ನೆ ಮಾಡುವವರು ಎಂದು ಹೇಳಿ ಕೋರ್ಟ್ ತಡೆಹಿಡಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT