ರಾಜ್ಯ

ಬೆಂಗಳೂರು: ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ವಶ, ಆಫ್ರಿಕನ್ ಪ್ರಜೆ ಬಂಧನ

Sumana Upadhyaya

ಬೆಂಗಳೂರು: ನಗರದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಆಫ್ರಿಕನ್ ಡ್ರಗ್ ಕಳ್ಳಸಾಗಣೆದಾರನನ್ನು ಬಂಧಿಸಿ 1.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು ವಶಪಡಿಸಿಕೊಂಡಿದೆ. 

ಬಂಧಿತ ಆಫ್ರಿಕಾ ಪ್ರಜೆಯನ್ನು ಬೆಂಜಮಿನ್ ಸಂಡೆ ಎಂದು ಗುರುತಿಸಲಾಗಿದ್ದು ಈತ ಚೆನ್ನೈಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ಮತ್ತು ಇಬ್ಬರು ಆಸ್ಟ್ರೇಲಿಯಾ ಪ್ರಜೆಗಳನ್ನು ಡ್ರಗ್ಸ್ ವಶಪಡಿಸಿಕೊಂಡು ಬಂಧಿಸಿರುವ ಪ್ರಕರಣದಲ್ಲಿ ಬೇಕಾದವನಾಗಿದ್ದಾನೆ. 

ನಾವು 968 ಗ್ರಾಂ ಆಂಫೆಟಮೈನ್ ಮತ್ತು 2.889 ಕೆಜಿ ಎಫೆಡ್ರಿನ್ ನ್ನು ವಶಪಡಿಸಿಕೊಂಡಿದ್ದೇವೆ ಎಂದು ಎನ್ ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

ಡ್ರಗ್ಸ್ ನ್ನು ಮುಚ್ಚಿಟ್ಟ ಬಗೆ ರೋಚಕ: ಬೆಂಜಮಿನ್ ನ್ನು ನಿನ್ನೆ ಎನ್ ಸಿಬಿ ಪೊಲೀಸರು ಬಂಧಿಸಿದ್ದರು. ಕೊರಿಯರ್ ಮೂಲಕ ವಿದೇಶಗಳಿಗೆ ಮತ್ತಷ್ಟು ರವಾನೆ ಮಾಡಲು ಮುಂಬೈನಿಂದ ಡ್ರಗ್ಸ್ ನ್ನು ತರಿಸಲಾಗಿತ್ತು. ಮೂರು ಮರದ ಟೈ ಬಾಕ್ಸ್‌ಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕುಳಿಯಲ್ಲಿ ಡ್ರಗ್ಸ್ ನ್ನು ಜಾಣತನದಿಂದ ಮುಚ್ಚಿ ತರಲಾಗಿತ್ತು. ಪ್ರತಿ ಬಾಕ್ಸ್‌ನಲ್ಲಿ 165 ಗ್ರಾಂ ಆಂಫೆಟಮೈನ್ ಇತ್ತು, ಆದರೆ ಎರಡು ಬ್ಯಾಕ್ ರೆಸ್ಟ್‌ಗಳು 237 ಗ್ರಾಂ ಮತ್ತು 236 ಗ್ರಾಂ ಆಂಫೆಟಮೈನ್ ಅನ್ನು ಒಳಗೊಂಡಿತ್ತು. 1.811 ಕೆಜಿ ಮತ್ತು 1.078 ಕೆಜಿ ಎಫೆಡ್ರಿನ್ ಒಳಗೊಂಡಿತ್ತು.

ಬಂಧಿತ ವ್ಯಕ್ತಿ ಚೆನ್ನೈನಲ್ಲಿ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದಾನೆ. ಮಾದಕವಸ್ತುಗಳ ಆಮದು ಮತ್ತು ರಫ್ತುಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2018ರ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ವಶಪಡಿಸಿಕೊಳ್ಳಲಾದ 113 ಗ್ರಾಂ ಕೊಕೇನ್‌ ಮತ್ತು 2021ರ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ 295 ಗ್ರಾಂ ಮೆಥಾಂಫೆಟಮೈನ್‌ಗಳನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು.

SCROLL FOR NEXT