ರಾಜ್ಯ

ಪಾರಂಪರಿಕ ಹಂಪಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರದ ಹೊಸ ಯೋಜನೆ

Shilpa D

ಹುಬ್ಬಳ್ಳಿ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿ ಅರಣ್ಯ ಭಾಗವನ್ನು ಪ್ರವಾಸಿಗರಿಗೆ ತೋರ್ಪಡಿಸಲು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಪರಿಚಯಿಸುತ್ತಿದೆ.

ಪ್ರವಾಸಿಗರು ತುಂಗಭದ್ರಾ ಓಟರ್ ಅಭಯಾರಣ್ಯಕ್ಕೆ ಭೇಟಿ ನೀಡಬಹುದಾಗಿದೆ, ವಿಜಯ ವಿಟ್ಠಲ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದೊಳಗೆ ಟ್ರೆಕ್ಕಿಂಗ್ ಮಾಡುವುದರ ಜೊತೆಗೆ, ಅಪರೂಪದ ಹಳದಿ ಕಂಠದ ಬುಲ್ ಬುಲ್ ಹಕ್ಕಿಯನ್ನು ವೀಕ್ಷಿಸಬಹುದಾಗಿದೆ.

ಹಂಪಿ ಹಲವಾರು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ವಲಸೆ ಹಕ್ಕಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತವೆ. ತುಂಗಭದ್ರಾ ನದಿಯ ಉದ್ದಕ್ಕೂ ಅಪರೂಪದ ನೀರುನಾಯಿಗಳನ್ನು  ನೋಡಬಹುದಾಗಿದೆ. ಈ ಪ್ಯಾಕೇಜ್ ಪ್ರವಾಸವೂ ಪ್ರವಾಸವು ಪಾರಂಪರಿಕ ಸ್ಮಾರಕಗಳು ಹಾಗೂ ವನ್ಯಜೀವಿಗಳ ತಾಣಗಳ ಭೇಟಿಯನ್ನೂ ಒಳಗೊಂಡಿರುತ್ತದೆ.

ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಪ್ರವಾಸ ಆರಂಭವಾಗವಿದೆ, ಪರಿಸರ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಬಹುದು. ಪ್ಯಾಕೇಜ್‌ಗೆ ತಗಲುವ ವೆಚ್ಚವನ್ನು ಪ್ರಾಯೋಗಿಕವಾಗಿ  ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಪಿ ಸಿದ್ರಾಮಪ್ಪ ಚಳ್ಕಾಪುರೆ ಹೇಳಿದರು.

SCROLL FOR NEXT