ರಾಜ್ಯ

ಪ್ರತಿಭಟನೆಗೆ ಮುಂದಾದ ಗುತ್ತಿಗೆದಾರರು: ಡಿ.31ರಿಂದ ಸಿಲಿಕಾನ್ ಸಿಟಿಯಲ್ಲಿ ತಲೆದೋರಲಿದೆ ಕಸದ ಸಮಸ್ಯೆ!

Manjula VN

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸದ ಗುತ್ತಿಗೆದಾರರ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಡಿಸೆಂಬರ್ 31 ರಿಂದ ನಾಗರಿಕರು ತಮ್ಮ ಕಸವನ್ನು ತಾವೇ ನಿರ್ವಹಣೆ ಮಾಡಬೇಕಾಗಿದ ಪರಿಸ್ಥಿತಿ ಎದುರಾಗಬಹುದು.

ಡಿ.8ರಂದು ತಮ್ಮ ಸಮಸ್ಯೆಗಳ ಪಟ್ಟಿಯನ್ನು ಗುತ್ತಿಗೆದಾರರು ಅಧಿಕಾರಿಗಳ ಮುಂದಿಟ್ಟಿದ್ದು, ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದೇ ಹೋದರಲ್ಲಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಡಿಸೆಂಬರ್ 31 ರಂದು ಕರ್ನಾಟಕ ಬಂದ್‌ನ ಅಂಗವಾಗಿ ಮುಷ್ಕರ ನಡೆಸಲಾಗುವುದು ಮತ್ತು ಜನವರಿ 1 ರಿಂದ ಮುಷ್ಕರವನ್ನು ಅನಿರ್ದಿಷ್ಟಾವಧಿ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಮುಖ್ಯಸ್ಥ ಎಸ್.ಎನ್.ಬಾಲಸುಬ್ರಮಣ್ಯ ಹೇಳಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಹರೀಶ್ ಕುಮಾರ್ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರೊಂದಿಗೆ ಸಭೆ ಕರೆದಿದ್ದೇವೆಂದು ಹೇಳಿದ್ದಾರೆ.

SCROLL FOR NEXT