ರಾಜ್ಯ

ಜ.10ರಿಂದ ಬೂಸ್ಟರ್‌ ಡೋಸ್‌ ಗೆ ಸಿದ್ಧತೆ: ಫಲಾನುಭವಿಗಳ ಪಟ್ಟಿ ಕುರಿತು ರಾಜ್ಯದಲ್ಲಿ ಗೊಂದಲ

Srinivasamurthy VN

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ನೀಡುವ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಬೂಸ್ಟರ್ ಡೋಸ್ ಲಸಿಕಾ ಫಲಾನುಭವಿಗಳ ಕುರಿತು ಗೊಂದಲ ಸೃಷ್ಟಿಯಾಗದಿದೆ.

ಹೌದು.. ಪ್ರಧಾನಿ ಮೋದಿ ಘೋಷಣೆ ಪ್ರಕಾರ ರಾಜ್ಯದ ಆರೋಗ್ಯ ಇಲಾಖೆ ಬೂಸ್ಟರ್‌ ಡೋಸ್‌ ವಿತರಣೆಗೆ ಸಿದ್ಧತೆ ನಡೆಸಿದ್ದು, ಆದೇಶಕ್ಕಾಗಿ ಕಾಯುತ್ತಿದೆ. ಸದ್ಯ ರಾಜ್ಯದಲ್ಲಿ ಎರಡನೇ ಡೋಸ್‌ ಪಡೆದಿರುವ 7,19,303 ಆರೋಗ್ಯ ಕಾರ್ಯಕರ್ತರು, 8,90,739 ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರು 59,92,946 ಮಂದಿ ಹಿರಿಯ ನಾಗರಿಕರಿದ್ದು, ಇವರೆಲ್ಲರೂ ಬೂಸ್ಟರ್‌ ಡೋಸ್‌ ಪಡೆಯಲು ಅರ್ಹರಿದ್ದಾರೆ.

ಆದರೆ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮುಂಚೂಣಿ ಕಾರ್ಯಕರ್ತರ ಕೇಂದ್ರ ಮತ್ತು ರಾಜ್ಯ ಪಟ್ಟಿ ತಯಾರಿಸಿದೆ. ಕೇಂದ್ರ ಪಟ್ಟಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಿಬಂದಿ, ಪೊಲೀಸ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬಂದಿಯನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ರಾಜ್ಯ ಪಟ್ಟಿಯಲ್ಲಿ ಶಿಕ್ಷಕರು, ಸಾರಿಗೆ,ಸ್ಮಶಾನದಲ್ಲಿ ಕಾರ್ಯನಿರ್ವಹಿಸುವವರು, ಆಟೋಮತ್ತು ಕ್ಯಾಬ್‌ ಚಾಲಕರು, ಅಂಚೆ ಇಲಾಖೆ ಸಿಬಂದಿ, ಬೀದಿ ಬದಿ ವ್ಯಾಪಾರಿಗಳು, ನ್ಯಾಯಾಂಗ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬಂದಿ, ಮಾಧ್ಯಮ, ಪೆಟ್ರೋಲ್‌ ಬಂಕ್‌ ಕೆಲಸಗಾರರು, ಆಹಾರ ನಿಗಮ, ಎಪಿಎಂಸಿ ಸೇರಿದಂತೆ ಹಲವು ಕ್ಷೇತ್ರಗಳನ್ನು ಪರಿಗಣಿಸಲಾಗಿದೆ.

ಹೀಗಾಗಿ ರಾಜ್ಯದಲ್ಲಿ ಬೂಸ್ಟರ್ ಡೋಸ್ ಫಲಾನುಭವಿಗಳ ಕುರಿತು ಇನ್ನೂ ಸ್ಪಷ್ಟ ಚಿತ್ರಣ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪಟ್ಟಿಯನ್ನು ಅನುಸರಿಸುತ್ತದೆಯೋ ಅಥವಾ ರಾಜ್ಯದ ಹಾಲಿ ಮುಂಚೂಣಿ ಕಾರ್ಯಕರ್ತರ ಪಟ್ಟಿಯನ್ನೇ ಮುಂದುವರೆಸುತ್ತದೆಯೋ ಎಂಬುದುನ್ನು ಕಾದು ನೋಡಬೇಕಿದೆ.
 

SCROLL FOR NEXT