ರಾಜ್ಯ

ಬೆಂಗಳೂರು: ಪಬ್ ನಲ್ಲಿ ಮ್ಯೂಸಿಷಿಯನ್'ಗೆ ಹಾವು ಕಡಿತ, ಸ್ಥಿತಿ ಗಂಭೀರ

Manjula VN

ಬೆಂಗಳೂರು: ನಗರದ ಖ್ಯಾತ ಮ್ಯೂಸಿಯಿಷಿನ್ ಹರ್ಬರ್ಟ್ ಪೌಲ್ ಅವರಿಗೆ ಪಬ್ ನಲ್ಲಿ ಹಾವು ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಹೆಣ್ಣೂರು ರಸ್ತೆಯಲ್ಲಿರುವ ಪಬ್ ನಲ್ಲಿ ಮ್ಯೂಸಿಕ್ ಪ್ಲೇ ಮಾಡುತ್ತಿದ್ದ ಸಂದರ್ಭದಲ್ಲಿ ರಸ್ಸೆಲ್​ ವೈಪರ್​ (ಮಂಡಲ ಹಾವು) ಕಚ್ಚಿದ್ದು, ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಹರ್ಬರ್ಟ್ ಪೌಲ್ ಅವರ ಪತ್ನಿ ಬಿಂದು ಅವರೂ ಕೂಡ ಮ್ಯೂಸಿಷಿಯನ್ ಹಾಗೂ ಸಂಗೀತ ಶಿಕ್ಷಕಿಯಾಗಿದ್ದಾರೆ. ಪೌಲ್ ಅವರಿಗೆ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೌಲ್ ಆರೋಗ್ಯ ಸ್ಥಿರವಾಗಿದೆ. ಆದರೆ, ಇಸಿಜಿಯಲ್ಲಿ ಏರಿಳಿತಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಐಸಿಯುವಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಂದು ಅವರು ಹೇಳಿದ್ದಾರೆ.

ರಸ್ಸೆಲ್​ ವೈಪರ್​ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಒಂದಾಗಿದೆ. ಈ ಹಾವು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡು ಬರುತ್ತವೆ. ರಸ್ಸೆಲ್ ವೈಪರ್ ಹೆಮೋಟಾಕ್ಸಿನ್ ಅನ್ನು ಹೊಂದಿದ್ದು, ಮನುಷ್ಯನದ ಹೃದಯ ಬಡಿತದಲ್ಲಿ ಏರಿಳಿತವನ್ನು ಉಂಟುಮಾಡುತ್ತದೆ. ಹಾವು ರಾತ್ರಿ ಸಮಯದಲ್ಲಿ ಮುಂಚೂಣಿಯಲ್ಲಿರುವುದರಿಂದ ಕತ್ತಲೆಯಲ್ಲಿ ಅಡಗಿಕೊಳ್ಳುತ್ತದೆ. ಈ ಹಾವುಗಳು ಮಾಡುವ ಶಬ್ಧ ಇತರೆ ಹಾವುಗಳಿಗಿಂತ ಜೋರಾಗಿರುತ್ತದೆ ಎಂದು ಉರಗ ತಜ್ಞ ಮೊಹಮ್ಮದ್ ಅನೀಸ್ ಹೇಳಿದ್ದಾರೆ.

SCROLL FOR NEXT