ರಮೇಶ್ ಜಾರಕಿಹೋಳಿ 
ರಾಜ್ಯ

'ಮಹಾರಾಷ್ಟ್ರಕ್ಕೆ ಒಂದಿಂಚು ಭೂಮಿಯನ್ನು ನೀಡುವುದಿಲ್ಲ': ಠಾಕ್ರೆ ಹೇಳಿಕೆಗೆ ರಮೇಶ್ ಜಾರಕಿಹೋಳಿ ತಿರುಗೇಟು

ಕರ್ನಾಟಕದ “ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ” ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆಯ ವಿರುದ್ಧ ಕನ್ನಡ ಕಾರ್ಯಕರ್ತರು ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು: ಕರ್ನಾಟಕದ “ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ” ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆಯ ವಿರುದ್ಧ ಕನ್ನಡ ಕಾರ್ಯಕರ್ತರು ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ತೀವ್ರ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರ ಈ ವಿಷಯದ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಜಾರಕಿಹೋಳಿ ಹೇಳಿದರು. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ್ ಆಯೋಗದ ವರದಿಯನ್ನು ಈಗಾಗಲೇ ಅಂಗೀಕರಿಸಲಾಗಿದೆ ಮತ್ತು ಒಂದು ಇಂಚು ಭೂಮಿಯನ್ನು ಸಹ ಮಹಾರಾಷ್ಟ್ರಕ್ಕೆ ನೀಡುವ ಪ್ರಶ್ನೆಯೇ ಇಲ್ಲ”, ಮಹಾರಾಷ್ಟ್ರ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಈ ವಿಚಾರವನ್ನು ಮುಂದೆ ತರುತ್ತಿದೆ ಎಂದು ಅವರು ಆರೋಪಿಸಿದರು. 

ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ  ಠಾಕ್ರೆ ಅವರ ಹೇಳಿಕೆ "ಮೂರ್ಖತನ"ದ್ದಿದೆ ಎಂದು  ಕರೆದರು, “ಮಹಾರಾಷ್ಟ್ರದ ರಾಜಕಾರಣಿಗಳು ಮುಗಿದ ಅಧ್ಯಾಯದಿಂದ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ಈ ಭಾಗದಲ್ಲಿ ಜನಿಸಿದ ಮರಾಠಿ ಜನರು ಇಷ್ಟು ವರ್ಷಗಳಿಂದ ಸಂತೋಷದಿಂದ ಬದುಕುತ್ತಿದ್ದಾರೆ. ಒಂದು ಕಾಲದಲ್ಲಿ ಬೆಳಗಾವಿದೇಶದಲ್ಲಿ ಸುಮಾರು ಆರರಿಂದ ಏಳು ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕಿಕರಣ ಸಮಿತಿ(ಎಂಇಎಸ್) ನಂತಹ ಮಹಾರಾಷ್ಟ್ರ ಪರ ಸಂಘಟನೆಯಲ್ಲಿ ಇಂದು ಯಾರೊಬ್ಬ ಶಾಸಕರೂ ಇಲ್ಲ." ಅವರು ಹೇಳಿದ್ದಾರೆ.

ಬೆಳಗಾವಿಯ  ಪ್ರಸಿದ್ಧ ಕನ್ನಡ ನಾಯಕ ಅಶೋಕ್ ಚಂದರಗಿ “ಮಹಾರಾಷ್ಟ್ರ ಸರ್ಕಾರ ಈಗಾಗಲೇ ಗಡಿರೇಖೆ ಕುರಿತು ಸುಪ್ರೀಂಕೋರ್ಟ್ ಮುಂದೆ ಪ್ರಕರಣ ದಾಖಲಿಸಿದೆ. ವಿವಾದದ ಬಗ್ಗೆ ಯಾವುದೇ ಹೇಳಿಕೆನ್ಯಾಯಾಲಯದ ತಿರಸ್ಕಾರಕ್ಕೆ ಸಮನಾಗಿರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ಠಾಕ್ರೆ  ಗಮನ ನೀಡಿದ್ದಾದರೆ ಅವರು ತಮ್ಮ ಪ್ರಕರಣ ಹಿಂಪಡೆಯಬೇಕು ಮತ್ತು ನ್ಯಾಯಾಲಯದ ಹೊರಗೆ ತನ್ನ ಹೋರಾಟವನ್ನು ಪ್ರಾರಂಭಿಸಬೇಕು. ’’

ಸೋಲಾಪುರವನ್ನು ಕರ್ನಾಟಕಕ್ಕೆ ಕೊಡಿ

ಕರ್ನಾಟಕದಿಂದ ಒಂದು ಇಂಚು ಭೂಮಿಯನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದರೂ ಠಾಕ್ರೆ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಟಿ ಎಸ್ ನಾಗಭರಣ ಹೇಳಿದರು.  ” ಈ ಎಲ್ಲ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ಕರ್ನಾಟಕ ರಕ್ಷನಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಹೇಳಿದರು. "ಈ ವಿಷಯವನ್ನು ಚರ್ಚಿಸುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

"ಈ ಕುರಿರು ಮಾತನಾಡುವ ಬದಲು ಮಹಾರಾಷ್ಟ್ರದಲ್ಲಿರುವ ಸೋಲಾಪುರವನ್ನು ಮತ್ತೆ ಕರ್ನಾಟಕೆಕ್ಕೆ ನೀಡಬೇಕು ಎಂದು ಕನ್ನಡ ಹೋರಾಟಗಾರ  ವಾಟಾಳ್ ನಾಗರಾಜ್  ಮತ್ತು ಗೌಡ ಹೇಳಿದ್ದಾರೆ.  "ಗಡಿ ಜಿಲ್ಲೆಯ ಸುಮಾರು 120 ಹಳ್ಳಿಗಳಲ್ಲಿ, ಕನ್ನಡ ಮಾತನಾಡುವ ಜನರು ಬಹುಸಂಖ್ಯಾತರಾಗಿದ್ದಾರೆ, ಅವರಿಗೆ ಮೂಲ ಸೌಕರ್ಯವನ್ನು ನಿರಾಕರಿಸಲಾಗಿದೆ. ಅವರು ಕರ್ನಾಟಕದ ಭಾಗವಾಗಲು ಬಯಸುತ್ತಾರೆ ”ಎಂದು ಗೌಡ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT