ರಾಜ್ಯ

ರಾಜ್ಯದಲ್ಲಿ ಹಂತ ಹಂತವಾಗಿ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಿ: ಖಾಸಗಿ ಶಾಲೆಗಳಿಂದ ಸರ್ಕಾರಕ್ಕೆ ಬೇಡಿಕೆ

Raghavendra Adiga

ಬೆಂಗಳೂರು: ಹಂತ ಹಂತವಾಗಿ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಖಾಸಗಿ ಶಾಲೆಗಳು ಸರ್ಕಾರವನ್ನು ಒತ್ತಾಯಿಸಿದೆ,ಶಿಕ್ಷಣ ಇಲಾಖೆಯು ಆಫ್‌ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಕಟ್ಟುನಿಟ್ಟಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕದ ಖಾಸಗಿ ಶಾಲೆ ಮತ್ತು ಕಾಲೇಜುಗಳ ನಿರ್ವಹಣಾ ಸಂಘದ ಸದಸ್ಯರು ಹೇಳಿದರು.

ಕೋವಿಡ್ ಪಾಸಿಟಿವಿಟಿ ದರವು ಶೇಕಡಾ 3 ಕ್ಕಿಂತ ಕಡಿಮೆಯಾಗಿರುವುದರಿಂದ ಸರ್ಕಾರ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಅದು ಹೇಳಿದೆ. ಇಲ್ಲದಿದ್ದರೆ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. "ಕಳೆದ 15 ತಿಂಗಳುಗಳಲ್ಲಿ, ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿಲ್ಲ ಶಾಲಾ ಜೀವನವನ್ನು ಮರೆತಿದ್ದಾರೆ ಮತ್ತು ವಿವಿಧ ಸಾಮಾಜಿಕ ದುಷ್ಕೃತ್ಯಕ್ಕೆ  ಗುರಿಯಾಗಿದ್ದಾರೆ" ಎಂದು ಫೆಡರೇಶನ್ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ರ ಹೇಳಿದ್ದಾರೆ. ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸುವ ಮೊದಲು ಪೋಷಕರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ಲಸಿಕೆ ನೀಡಬೇಕೆಂದು ಸಹ ಅವರು ಮನವಿ ಮಾಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯಗೊಳಿಸಲಾಗಿಲ್ಲ ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ಮೊದಲು ಲಸಿಕೆ ಹಾಕಲು ಕನಿಷ್ಠವಿದ್ಯಾರ್ಥಿಗಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಉಪಮುಖ್ಯಮಂತ್ರಿ ಡಾ.ಎನ್.ಎನ್.ಅಶ್ವತ್ಥ ನಾರಾಯಣ ಮಂಗಳವಾರ ಹೇಳಿದ್ದಾರೆ. ಆದರೆ ಲಸಿಕೆ ನೀಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ವರ್ಷ ಪೋಷಕರು ಮತ್ತು ಶಾಲೆಗಳು ತೊಂದರೆಗಳನ್ನು ಎದುರಿಸಿದ್ದರಿಂದ ಶುಲ್ಕ ಪಾವತಿಯ ಗೊಂದಲವನ್ನು ಕೊನೆಗೊಳಿಸಲು ಫೆಡರೇಷನ್‌ಗಳು ಸರ್ಕಾರದ ಹಸ್ತಕ್ಷೇಪ ಕೇಳಿದೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಯೋಜನೆಯನ್ನು ವಿಸ್ತರಿಸಬೇಕು ಎಂದು ಅದು ಹೇಳಿದೆ. ಸರ್ಕಾರದಿಂದ ವಿಭಿನ್ನ ಹೇಳಿಕೆಗಳು ಬರುತ್ತಿರುವುದರಿಂದ ಎರಡನೇ ಪಿಯುಸಿ ಫಲಿತಾಂಶಗಳ ಬಗ್ಗೆ ವಸ್ತುನಿಷ್ಠ ನಿರ್ಧಾರವನ್ನು ಕೋರಿದೆ.

SCROLL FOR NEXT