ರಾಜ್ಯ

ನೀರು ಬಳಕೆ ನೀತಿ ಕುರಿತು ಸಂಪುಟ ಸಮಿತಿಯಲ್ಲಿ ಚರ್ಚೆ

Manjula VN

ಬೆಂಗಳೂರು: ನೀರಿನ ಬಳಕೆಗಾಗಿ ಸಮಗ್ರ ನೀತಿ ರೂಪಿಸುತ್ತಿರುವ ಸಂಪುಟ ಉಪಸಮಿತಿ ಶನಿವಾರ ಉಪಮುಖ್ಯಮಂತ್ರಿ ಗೋವಿಂದ್ ಕಾರ್ಜೋಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಈ ವೇಳೆ ಐದು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ. 

ಕುಡಿಯುವ, ನೀರಾವರಿ, ಪಶುಸಂಗೋಪನೆ, ವಿದ್ಯುತ್, ಕೈಗಾರಿಕೆಗಳು ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. 

ಪ್ರಸ್ತುತ ಲಭ್ಯತೆಯ ಆಧಾರದ ಮೇಲೆ ಪ್ರತೀ ವ್ಯಕ್ತಿಗೆ ನೀರಿನ ಬಳಕೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 55 ಲೀಟರ್, ನಗರ ಪ್ರದೇಶಗಳಲ್ಲಿ 75 ಲೀಟರ್ ಮತ್ತು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 90 ಲೀಟರ್ ರಂತೆ ಬಳಕೆ  ಮಾಡಲಾಗುತ್ತಿದೆ. 

ಸಭೆಯಲ್ಲಿ ಪ್ರಸ್ತುತ ಎದ್ದಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿವರಗಳ ಸಲ್ಲಿಸಲು ಅಧಿಕಾರಿಗಳಿಗೆ 15 ದಿನಗಳ ಕಾಲಾವಕಾಶವನ್ನು ಸಮಿತಿ ನೀಡಿದೆ ಎಂದು ತಿಳಿದುಬಂದಿದೆ. 

SCROLL FOR NEXT