ಸಂಗ್ರಹ ಚಿತ್ರ 
ರಾಜ್ಯ

ಡಿಜೆ ಹಳ್ಳಿ: ಹತ್ಯೆಗಾಗಿ ಕರೆತರಲಾಗಿದ್ದ ಆರು ಜಾನುವಾರುಗಳ ರಕ್ಷಣೆ

ಗೋ ಗ್ಯಾನ್ ಫೌಂಡೇಶನ್‌ನ ಸದಸ್ಯರು ಸ್ಥಳೀಯ ಪೊಲೀಸರ ಸಹಾಯದಿಂದ ಭಾನುವಾರ ಡಿಜೆ ಹಳ್ಳಿಯ ಪ್ರದೇಶದ ನಿವಾಸಿಗಳು ಕರೆತಂದ ಆರು ದನಗಳ ರಕ್ಷಿಸಿದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರು: ಗೋ ಗ್ಯಾನ್ ಫೌಂಡೇಶನ್‌ನ ಸದಸ್ಯರು ಸ್ಥಳೀಯ ಪೊಲೀಸರ ಸಹಾಯದಿಂದ ಭಾನುವಾರ ಡಿಜೆ ಹಳ್ಳಿಯ ಪ್ರದೇಶದ ನಿವಾಸಿಗಳು ಕರೆತಂದ ಆರು ದನಗಳ ರಕ್ಷಿಸಿದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ದನಗಳನ್ನು ಮುಂಬರುವ ಹಬ್ಬಕ್ಕಾಗಿ ಹತ್ಯೆ ಮಾಡಲು ಅಕ್ರಮವಾಗಿ ಇಲ್ಲಿಗೆ ತರಲಾಗಿದೆ ಎಂದು ಆರೋಪಿಸಲಾಗಿದೆ.

ಸ್ವಯಂಸೇವಕರೊಬ್ಬರು ಈ ಪ್ರದೇಶದಲ್ಲಿ ಅಲೆದಾಡಿ ಪ್ರಾಣಿಗಳ  ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಮತ್ತು ಪೊಲೀಸರನ್ನು ಎಚ್ಚರಿಸುವ ಮೊದಲು ಆ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಡಿಜೆ ಹಳ್ಳಿಯ  ವಿವಿಧ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ತಿರುಗಾಡಿದ್ದಾರೆಂದು ಪ್ರತಿಷ್ಠಾನ ತಿಳಿಸಿದೆ.

ಈ ಪ್ರದೇಶದಲ್ಲಿ 25 ಕ್ಕೂ ಹೆಚ್ಚು ಜಾನುವಾರುಗಳನ್ನು ವಧೆ ಮಾಡಲಾಗುವುದು ಎಂದು ಗುರುತಿಸಲಾಗಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ. ಪೊಲೀಸ್ ತಂಡವು ಅಲ್ಲಿನ ಕೆಲವು ಮನೆಗಳಿಗೆ ಭೇಟಿ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ದನಗಳನ್ನು  ಕಟ್ಟಿಹಾಕಿ ವಿಚಾರಣೆಯ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವರ್ಷದ ಆರಂಭದಲ್ಲಿ  ಕರ್ನಾಟಕ ಗೋಹತ್ಯೆ ತಡೆ ಮತ್ತು ದನಕರು ಸಂರಕ್ಷಣಾ ಕಾಯ್ದೆ 2020ಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದರು ಮತ್ತು ಎಲ್ಲಾ ಜಾನುವಾರುಗಳನ್ನು (ದನಗಳು, ಎತ್ತುಗಳು, ಕರುಗಳು ಮತ್ತು ಎಮ್ಮೆಗಳು) ವಧೆ ಮಾಡುವ ಉದ್ದೇಶದಿಂದ ವಧೆ, ವ್ಯಾಪಾರ ಮತ್ತು ಸಾಗಾಟವನ್ನು ಸಂಪೂರ್ಣ ನಿಷೇಧಿಸಿದ್ದರು.

ದನಗಳ ಹತ್ಯೆಯನ್ನು ಕಾನೂನುಬಾಹಿರಗೊಳಿಸಿದ ಕರ್ನಾಟಕ ಗೋ ಸಂರಕ್ಷಣಾ ಕಾಯ್ದೆ 1964 ರ ಮೇಲೆ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಸ್ವಯಂಸೇವಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel