ರಾಜ್ಯ

ಉತ್ತರ ಪ್ರದೇಶದ ಅಮೇಥಿಯಲ್ಲಿ ಕ್ರೂರ ಕೃತ್ಯ: 16 ವರ್ಷದ ಬಾಲಕಿಯನ್ನು ಅಪಹರಿಸಿ 5 ದಿನ ಸತತ ಅತ್ಯಾಚಾರ!

Sumana Upadhyaya

ಅಮೇಥಿ: 16 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿದ ಯುವಕ 5 ದಿನಗಳ ಕಾಲ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.

ಕಳೆದ ಜುಲೈ 9ರಂದು ಮನೆ ಹತ್ತಿರದ ಕೊಳವೆ ಬಾವಿಯಿಂದ ನೀರು ತುಂಬಿಕೊಳ್ಳಲೆಂದು ಬಾಲಕಿ ಹೋಗಿದ್ದ ವೇಳೆ ಯುವಕ ಆಕೆಯನ್ನು ಅಪಹರಿಸಿ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

5 ದಿನಗಳ ಕಾಲ ಸತತ ಅತ್ಯಾಚಾರವೆಸಗಿದ ನಂತರ ಬಾಲಕಿ ಹೇಗೋ ಕಾಮುಕ ಯುವಕನ ಕೈಯಿಂದ ತಪ್ಪಿಸಿ ಹೊರಗೆ ಬಂದಿದ್ದಾಳೆ, ಕುಟುಂಬಸ್ಥರಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದ ಮೇಲೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಲಾಗಿದ್ದು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

SCROLL FOR NEXT