ರಾಜ್ಯ

ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ; ಗೃಹ ಸಚಿವರಿಗೆ ಆರ್'ಟಿಐ ಕಾರ್ಯಕರ್ತರ ಆಗ್ರಹ

Manjula VN

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಕಾರ್ಯಕರ್ತ ಬರ್ಬರ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆರ್'ಟಿಐ ಕಾರ್ಯಕರ್ತರ ಗುಂಪೊಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ. 

ನಿನ್ನೆಯಷ್ಟೇ ಆರ್'ಟಿಐ ಕಾರ್ಯಕರ್ತರ ಗುಂಪು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜನೀಶ್ ಗೋಯೆಲ್, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ಅವರನ್ನು ಭೇಟಿ ಮಾಡಿದರು. 

ನಮ್ಮ ಆಗ್ರಹಗಳ ಬಳಿಕ ಗೃಹ ಸಚಿವ ಬೊಮ್ಮಾಯಿಯವರು ಆರ್'ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿಯೂ ವಿಳಂಬ ನೀತಿ ಅನುಸರಿಸದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಲ್ಳುವ ಭರವಸೆಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ನೀಡಿದ್ದಾರೆ. ಅಲ್ಲದೆ, 30 ದಿನಗಳೊಳಗಾಗಿ ಪ್ರಕರಣ ಸಂಬಂಧ ಜಾರ್ಜ್ ಶೀಟ್ ಸಲ್ಲಿಸುವಂತೆಯೂ ಡಿಜಿ ಹಾಗೂ ಐಜಿಪಿಗೆ ಸೂಚನೆ ನೀಡಿದ್ದಾರೆಂದು ಆರ್'ಟಿಐ ಕಾರ್ಯಕರ್ತರ ಗುಂಪಿನಲ್ಲಿದ್ದ ಸುಧಾ ಕತ್ವಾ ಎಂಬುವವರು ಹೇಳಿದ್ದಾರೆ. 

SCROLL FOR NEXT