ರಾಜ್ಯ

ಬೆಂಗಳೂರು: ಕಳೆದು ಹೋಗಿದ್ದ ಚರ್ಚ್ ನ ಹಣವನ್ನು ವಶಪಡಿಸಿಕೊಂಡು ಮರಳಿಸಿದ ರೈಲ್ವೆ ಸಂರಕ್ಷಣಾ ಪಡೆ

Shilpa D

ಬೆಂಗಳೂರು: ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕಳೆದುಕೊಂಡಿದ್ದ ಹಣದ ಬ್ಯಾಗ್ ವೊಂದನ್ನು ಅದರ ಮಾಲೀಕರಿಗೆ ಮರಳಿಸಿದ್ದಾರೆ.

ಕೊಯಂಬತ್ತೂರಿಗೆ ತೆರಳುತ್ತಿದ್ದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಜುಲೈ 15 ರಂದು ಚರ್ಚ್ ಗೆ ಸೇರಿದ್ದ ಹಣವಿದ್ದ  ಲಗ್ಗೇಜು ಮಿಸ್ ಪ್ಲೇಸ್ ಆಗಿತ್ತು. ಅದರಲ್ಲಿ 38 ಸಾವಿರ ರು ಹಣ ಮತ್ತು 10 ಸಾವಿರ ಮೌಲ್ಯದ ವಸ್ತುಗಳಿದ್ದವು, ಈ ಹಣ ಹೆಣ್ಣೂರು ರಸ್ತೆಯಲ್ಲಿರುವ ಪೆಂಟಕೋಸ್ಟಲ್ ಮಿಷನ್ ಗೆ ಸೇರಿದ್ದಾಗಿತ್ತು. 

ಗುರುವಾರ (ಜುಲೈ 15) ರಾತ್ರಿ ತಮ್ಮ ರೈಲು (ನಂ. 06078) ಹತ್ತಿದಾಗ ಅವರು ಅದನ್ನು ನಿಲ್ದಾಣದ ಪ್ಲಾಟ್‌ಫಾರ್ಮ್ 3 ರಲ್ಲಿ ಬಿಟ್ಟಿದ್ದಾರೆ ಎಂದು ಮೂಲವೊಂದು ತಿಳಿಸಿದೆ.  ಮತ್ತೊಂದು ಅಚ್ಚರಿ ವಿಷಯವೆಂದರ ಬ್ಯಾಗ್ ಕಾಣೆಯಾದ ಬಗ್ಗೆ ಅವರು ದೂರನ್ನು ಸಹ ದಾಖಲಿಸಿರಲಿಲ್ಲವಂತೆ.

ಯಲಹಂಕದಲ್ಲಿರುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ತಂಡವು ಗುರುವಾರ ರಾತ್ರಿ ಅದನ್ನು ನಿಲ್ದಾಣದಿಂದ ವಶಪಡಿಸಿಕೊಂಡಿದ್ದು, ಬ್ಯಾಗ್ ಮಾಲೀಕರನ್ನು ಪತ್ತೆ ಹಚ್ಚಿದೆ. ಯಲಹಂಕದ ಆರ್‌ಪಿಎಫ್ ನಿಲ್ದಾಣದಲ್ಲಿ ಮಿಷನ್‌ನ ಪಾದ್ರಿ ಸ್ಯಾಮ್ಯುಯೆಲ್ ಅವರಿಗೆ ಬ್ಯಾಗ್ ಹಸ್ತಾಂತರಿಸಲಾಯಿತು.

ಬ್ಯಾಗ್ ಎಲ್ಲಿ ಬಿಟ್ಟಿದ್ದೇವೆಂದು ನನ್ ಗಳಿಗೆ ತಿಳಿದಿರಲಿಲ್ಲ, ಹೀಗಾಗಿ ಅವರು ದೂರು ನೀಡಿರಲಿಲ್ಲ, ಆರ್ ಪಿಎಫ್ ಇಂದು ನಮಗೆ ಕರೆ ಮಾಡಿ ಬ್ಯಾಗ್ ಬಗ್ಗೆ ವಿಷಯ ತಿಳಿಸಿದಾಗ ನಮಗೆ ಆಶ್ಚರ್ಯ ಕಾದಿತ್ತು ಎಂದು ಚರ್ಚ್ ನ ಸದಸ್ಯರಾದ ಡಿಸೋಜಾ ತಿಳಿಸಿದ್ದಾರೆ.

ನಾವು ಈ ಬಗ್ಗೆ ಕೊಯಂಬತ್ತೂರಿನಲ್ಲಿರುವ ನನ್ ಗಳಿಗೆ ತಿಳಿಸಿದ್ದೇವೆ, ವಿಷಯ ಕೇಳಿದ ಅವರು ಅತೀವ ಸಂತೋಷ ವ್ಯಕ್ತ ಪಡಿಸಿದ್ದಾರೆ. ಕಳೆದು ಹೋದ ಬ್ಯಾಗ್ ಸಂಬಂಧ ನಾವು ದೂರನ್ನು ಕೂಡ ದಾಖಲಿಸಿರಲಿಲ್ಲ, ಆದರು ಬ್ಯಾಗ್ ಸಿಕ್ಕಿದೆ , ದೇವರ ಅನುಗ್ರಹ ನಮ್ಮನ್ನು ಕಾಪಾಡಿದೆ ಎಂದು ಹೇಳಿದ್ದಾರೆಂದು ಅವರು ತಿಳಿಸಿದರು.

ಯಲಹಂಕ ಎಎಸ್ ಐ ಎಂಸಿ ರಘುನಾಥ್, ಕಾನ್ಸ್ ಸ್ಟೇಬಲ್ ಪ್ರದೀಪ್ ಕುಮಾರ್, ರಂಗಸ್ವಾಮಿ ಮತ್ತು ಮಾಧವ್ ಸಿಂಗ್ ಮುಖ್ಯಪೇದೆ ಎಚ್ ಎನ್ ಮೂರ್ತಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

SCROLL FOR NEXT