ರಾಜ್ಯ

ಕೋವಿಡ್ -19: ಡೆಲ್ಟಾ ಪ್ರಕರಣಗಳಲ್ಲಿ ವಿಜಯಪುರ ಎರಡನೇ ಸ್ಥಾನದಲ್ಲಿ!

Shilpa D

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 94 ಡೆಲ್ಟಾ ರೂಪಾಂತರ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳು ದಾಖಲಾದ ಜಿಲ್ಲೆ ಇದಾಗಿದೆ.

ಜಿಲ್ಲಾಡಳಿತದ ಪ್ರಕಾರ, ಒಟ್ಟು 187 ಮಾದರಿಗಳನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ವಿಜ್ಞಾನ ಸಂಸ್ಥೆಗೆ (NIHMANS) ಕಳುಹಿಸಲಾಗಿದೆ. ಅವುಗಳಲ್ಲಿ 94 ಡೆಲ್ಟಾ ತಳಿ ಪ್ರಕರಣಗಳು ದೃಢಪಟ್ಟಿದ್ದು, 65 ಮಾದರಿಗಳ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಎರಡು ಲಸಿಕೆ ಪಡೆದ ನಂತರ ಕೊರೋನಾ ಸೋಂಕು ಬಂದವರ, 15 ವರ್ಷ ಒಳಗಿನವರ ಮಾದರಿಯನ್ನು ನಾವು ಪರೀಕ್ಷೆಗೆ ಕಳುಹಿಸಿದ್ದೇವೆ, ಮೇ ಮತ್ತು ಜೂನ್ ತಿಂಗಳಿನಲ್ಲಿ ನಾವು ಮಾದರಿಯನ್ನು ಕಳುಹಿಸಿದ್ದೆವು. ಜುಲೈ ಮೂರನೇ ವಾರದಲ್ಲಿ ಫಲಿತಾಂಶ ಬಂದಿದೆ ಎಂದು  ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜ್ ಕುಮಾರ್ ಯಾರಗಲ್ ತಿಳಿಸಿದ್ದಾರೆ.

SCROLL FOR NEXT