ರಾಜ್ಯ

ಕೋವಿಡ್-19 ಎಫೆಕ್ಟ್: ಖಾಸಗಿ ಶಾಲೆಗಳಿಗೆ ಶೇ.20-50 ರಷ್ಟು ಆದಾಯ ಕುಸಿತ, ಶೇ.55 ರಷ್ಟು ಶಿಕ್ಷಕರ ಸಂಬಳ ಕಡಿತ- ವರದಿ

Nagaraja AB

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದ ಧೀರ್ಘಕಾಲದಿಂದ ಶಾಲೆಗಳು ಬಂದ್ ಆಗಿರುವುದರಿಂದ ದೇಶಾದ್ಯಂತ ಬಹುತೇಕ ಖಾಸಗಿ ಶಾಲೆಗಳ ಶೇ 20-50 ರಷ್ಟು ಆದಾಯ ಕುಸಿತವಾಗಿದ್ದು, ಶಿಕ್ಷಕರ ಸಂಬಳದಲ್ಲಿ ಕಡಿತಕ್ಕೂ ಕಾರಣವಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ.

ದೇಶದಲ್ಲಿ ಗುಣಮಟ್ಟದ ಶಾಲಾ ಶಿಕ್ಷಣದ ಮೇಲೆ ಕೆಲಸ ಮಾಡುತ್ತಿರುವ ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ ಎನ್ ಜಿಒ, 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,100 (ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು) ಪ್ರತಿಕ್ರಿಯೆದಾರರ ಮೇಲೆ ನಡೆಸಿದ ಅಧ್ಯಯನ ಆಧಾರದ ಮೇಲೆ ವರದಿ ನೀಡಿದೆ.

ಈ ಶೈಕ್ಷಣಿಕ ಸಾಲಿನಲ್ಲಿ ಹೊಸ ದಾಖಲಾತಿ ಸಂಖ್ಯೆಯಲ್ಲಿ ಕಡಿಮೆಯಾಗಿರುವುದಾಗಿ ಶೇಕಡಾ 55 ರಷ್ಟು ಶಾಲೆಗಳು ಹೇಳಿದರೆ, ನಾಲ್ಕನೇ ಒಂದು ಭಾಗದಷ್ಟು ಶಾಲೆಗಳು ಆರ್‌ಟಿಇ ಮರುಪಾವತಿಯಲ್ಲಿ ವಿಳಂಬವನ್ನು ಎದುರಿಸಿವೆ. ಶೇಕಡಾ 25 ರಷ್ಟು ಆರ್ ಟಿಐ ಕೋಟಾದಡಿ ರಾಜ್ಯಸರ್ಕಾರದಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತಯೇತರ ಶಾಸಗಿ ಶಾಲೆಗಳು ಉಚಿತವಾಗಿ ಪ್ರವೇಶಾತಿ ನೀಡಬೇಕಾಗಿದೆ. ಉಚಿತ ಪ್ರವೇಶದ ಬದಲಾಗಿ, ರಾಜ್ಯವು ಮುಂಚಿತವಾಗಿ ನಿಗದಿಪಡಿಸಿದ ಮೊತ್ತವನ್ನು ಮರುಪಾವತಿ ಮಾಡುತ್ತದೆ.

ಖಾಸಗಿ ಶಾಲೆಗಳಲ್ಲಿ ಶೇ 20-50 ರಷ್ಟು ಆದಾಯ ಕಡಿಮೆಯಾಗಿದೆ. ಇದರಿಂದಾಗಿ ಶಾಲೆಗಳ ನಿರಂತರ ಕಾರ್ಯನಿರ್ವಹಣೆಗೆ ಕಷ್ಟವಾಗಿದೆ. ನಿಯಮಿತವಾಗಿ ಶುಲ್ಕ ಪಾವತಿಸಲು ಪೋಷಕರ ಅಸಮರ್ಥತೆಯಿಂದ ಶಾಲೆಗಳ ಆದಾಯಕ್ಕೆ ತೊಂದರೆಯಾಗಿದೆ. ಇದು ನಗರ ಪ್ರದೇಶದ ಶಾಲೆಗಳಲ್ಲಿ ಹೆಚ್ಚಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ  ಹೊಸ ದಾಖಲಾತಿ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಗಿರುವುದಾಗಿ ಶೇ.55 ರಷ್ಟು ಶಾಲೆಗಳು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ. 

ಲಾಕ್ ಡೌನ್ ವೇಳೆಯಲ್ಲಿ ಕನಿಷ್ಠ ಶೇ 55 ರಷ್ಟು ಖಾಸಗಿ ಶಾಲೆಗಳ ಶಿಕ್ಷಕರು ಸಂಬಳ ಕಡಿತ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಶುಲ್ಕವಿರುವ ಶಾಲೆಗಳಲ್ಲಿ ಶೇ.37 ರಷ್ಟು ಶಿಕ್ಷಕರ ಸಂಬಳವನ್ನು ಸ್ಥಗಿತಗೊಳಿಸಲಾಗಿದೆ. ಇವರಿಗೆ ಹೋಲಿಸಿದರೆ ಶೇ. 65 ರಷ್ಟು ಶಿಕ್ಷಕರ ಸಂಬಳವನ್ನು ತಡೆಹಿಡಿಯಲಾಗಿದೆ. ಕನಿಷ್ಠ 54 ರಷ್ಟು ಶಿಕ್ಷಕರು ಪರ್ಯಾಯ ಆದಾಯ ಮೂಲ ಹೊಂದಿಲ್ಲ ಎಂದು ವರದಿ ಹೇಳಿದೆ.    

SCROLL FOR NEXT