ರಾಜ್ಯ

ಮನೆ ಬಾಗಿಲಿಗೇ ವಾಹನ ವಿಮೆ, ಅಂಚೆ ಇಲಾಖೆಯಿಂದ ನಾಗರಿಕರಿಗೆ ಸೇವೆ 

Sumana Upadhyaya

ಬೆಂಗಳೂರು: ಇನ್ನು ಮುಂದೆ ನಿಮ್ಮ ಮನೆಯಿಂದಲೇ ಹೊಸ ವಾಹನದ ವಿಮಾ ಯೋಜನೆ ಸೌಲಭ್ಯವನ್ನು ಪಡೆಯಬಹುದು, ಈಗಿರುವ ವಿಮಾ ಯೋಜನೆಯನ್ನು ನವೀಕರಿಸುವುದನ್ನು ಕೂಡ ಮಾಡಬಹುದು. ರಾಜ್ಯ ಅಂಚೆ ಇಲಾಖೆ ನಾಗರಿಕರಿಗೆ ಈ ಸೌಲಭ್ಯ ಒದಗಿಸುತ್ತದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿ, ನಾವು ಈಗಾಗಲೇ ರಾಜ್ಯದ ಸುಮಾರು 3 ಸಾವಿರ ಅಂಚೆ ಪೇದೆ ಸಿಬ್ಬಂದಿಗೆ ತರಬೇತಿ ನೀಡಿದ್ದು ಅವರು ಈ ವಿಮಾ ಬುಕ್ಕಿಂಗ್ ಕೆಲಸ ನಿರ್ವಹಿಸಲಿದ್ದಾರೆ. ಮೈಕ್ರೊ ಎಟಿಎಂಗಳ ಮೂಲಕ ಈ ಸೇವೆಯನ್ನು ನೀಡಲಿದ್ದಾರೆ, ಅದರಲ್ಲಿ ಹಲವು ಗುಣಲಕ್ಷಣಗಳಿರುತ್ತವೆ ಎಂದರು. ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಅಂಚೆಪೇದೆ ಸಿಬ್ಬಂದಿಯಿದ್ದಾರೆ.

ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಇದಕ್ಕೆ ಹಸಿರು ನಿಶಾನೆ ನೀಡಿದೆ. ಈ ಕ್ರಮವು ಗ್ರಾಮೀಣ ಪ್ರದೇಶಗಳಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎನ್ನುತ್ತಾರೆ ಅಧಿಕಾರಿ. "ನಗರ ಪ್ರದೇಶಗಳಲ್ಲಿರುವವರು ತಮ್ಮ ವಿಮಾ ಯೋಜನೆಯನ್ನು ಬೇಗನೆ ನವೀಕರಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರ ಅವಧಿ ಮುಗಿದರೂ ವಿಮಾ ಯೋಜನೆಯನ್ನು ನವೀಕರಿಸುವುದಿಲ್ಲ. ಇದರಿಂದ ವಿಮಾ ಯೋಜನೆ ಕಳೆದುಹೋಗಬಹುದು. ನಾಗರಿಕರ ಮನೆ ಬಾಗಿಲಿಗೆ ಇದನ್ನು ನೀಡಿದರೆ ಉತ್ತಮವಾಗುತ್ತದೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಯಶಸ್ವಿಯಾಗಿ ನಡೆಸಲಾಗಿದೆ. ವಾಹನಗಳಿಗೆ ವಿಮಾ ಯೋಜನೆ ಮಾಡಿಸುವುದನ್ನು ಸರ್ಕಾರ ಕಡ್ಡಾಯ ಮಾಡುತ್ತಿದ್ದು ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ.

ಪ್ರಸ್ತುತ ಅಂಚೆ ಇಲಾಖೆ ವಿಮಾ ಯೋಜನೆ ಸೇವೆ ನೀಡುವ ಕೆಲಸವನ್ನು ಎರಡು ಖಾಸಗಿ ಸಂಸ್ಥೆಗಳಾದ ಟಾಟಾ ಎಐಜಿ ವಿಮೆ ಮತ್ತು ಬಜಾಜ್ ಅಲೈಯನ್ಸ್ ವಿಮಾ ಕಂಪೆನಿಗಳಿಗೆ ನೀಡಿದೆ. ಇದರಿಂದ ಅಂಚೆ ಇಲಾಖೆಗೂ ಮತ್ತೊಂದು ಆದಾಯ ಗಳಿಕೆಯ ಮೂಲವಾಗಲಿದೆ.

SCROLL FOR NEXT