ರಾಜ್ಯ

ಮಾಜಿ ಸಚಿವ ಅಪಹರಣದಲ್ಲಿ ಶಾಮೀಲಾಗಿದ್ದ ಇಬ್ಬರ ಬಂಧನ 

Srinivas Rao BV

ಬೆಂಗಳೂರು: ಮಾಜಿ ಶಾಸಕನ ಅಪಹರಣದ ಪ್ರಕರಣದಲ್ಲಿ ಬೇಕಾಗಿದ್ದ ನಟೋರಿಯಸ್ ಕ್ರಿಮಿನಲ್ ಗಳನ್ನು ಬೆಂಗಳೂರು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. 

"ಬುಧವಾರ, ಜು.28 ರಂದು ಬೆಳಿಗ್ಗೆ ಈ ಕಾರ್ಯಾಚರಣೆ ನಡೆದಿದ್ದು, ಓರ್ವ ಉದ್ಯಮಿಯ ಹತ್ಯೆಯ ಪ್ರಕರಣದಲ್ಲಿಯೂ ಈ ಆರೋಪಿಗಳು ಬೇಕಾಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಮೂಲದ ಕ್ರಿಮಿನಲ್ ಕವಿರಾಜ್ ಹಾಗೂ ಬೆಂಗಳೂರಿನಲ್ಲಿದ್ದ ಆತನ ಸಹವರ್ತಿ ಅಮರೇಶ್ ಬಂಧಿತ ಆರೋಪಿಗಳು. ಬೈಯ್ಯಪ್ಪನಹಳ್ಳಿಯಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದಾಗ ಈ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. 

ಶೋಧಕಾರ್ಯಾಚರಣೆಯಲ್ಲಿದ್ದ ತಂಡದ ಸಿಬ್ಬಂದಿಗಳ ಮೇಲೆ ಈ ಇಬ್ಬರೂ ಕ್ರಿಮಿನಲ್ ಗಳು ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸುವ ಕ್ರಮದಲ್ಲಿ ಇಂದಿರಾನಗರದ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಹಲಸೂರು ವಿಭಾಗದ ಎಸಿಪಿ ಕುಮಾರ್ ಅವರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 

ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜು.5 ರಂದು ಈ ಗ್ಯಾಂಗ್ ನ ಸದಸ್ಯರು ಉದ್ಯಮಿ ವಿಜಯ್ ಕುಮಾರ್ ಅವರನ್ನು ಹತ್ಯೆ ಮಾಡಿ 48 ಲಕ್ಷ ಪಡೆದಿದ್ದರು. ಇದೇ ಗ್ಯಾಂಗ್ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣದಲ್ಲಿಯೂ ಶಾಮೀಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಕೋಲಾರದಿಂದ ವರ್ತೂರು ಪ್ರಕಾಶ್ ಅವರನ್ನು ಅಹಪರಣ ಮಾಡಲಾಗಿತ್ತು.

SCROLL FOR NEXT