ರಾಜ್ಯ

ಜೂನ್ 7ರ ನಂತರ ಹಂತಹಂತದ ಅನ್ ಲಾಕ್: ಸುಳಿವು ಕೊಟ್ಟ ಡಿಸಿಎಂ!

Raghavendra Adiga

ಬೆಂಗಳೂರು: ಲಾಕ್‌ಡೌನ್ ವಿಸ್ತರಣೆಯ ಬಗ್ಗೆ ಊಹಾಪೋಹಗಳ ನಡುವೆಯೇ ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥನಾರಾಯಣ , ಜೂನ್ 7 ರ ನಂತರ ರಾಜ್ಯ ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂಬುದು "ಖಚಿತ" ಎಂದು ಹೇಳಿದ್ದಾರೆ. ಹಂತಹಂತವಾಗಿ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ.


ಪ್ರಸ್ತುತ ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ.ಅದನ್ನು ವಿಸ್ತರಿಸಲಾಗುತ್ತಿದೆ ಎಂಬ ಊಹಾಪೋಹಗಳು ಇದೆ.

" ಏಕಕಾಲದಲ್ಲಿ ಅನ್ ಲಾಕ್ ಮಾಡಬೇಕೋ ಅಥವಾ ಹಂತ ಹಂತವಾಗಿ ಮಾಡಬೇಕೇ ಎಂಬುದು ಪ್ರಶ್ನೆ ಇದೆ ಆದರೆ ಅನ್ ಲಾಕ್ ಖಚಿತ. ಆದರೆ ಅನ್ ಲಾಕ್ ಒಂದೇ ಬಾರಿಗೆ ಮಾಡುವ ಯಾವುದೇ ಯೋಜನೆಗಳಿಲ್ಲ" ಪ್ರ,ಸ್ತುತ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಭವಿಷ್ಯದ ಬಗ್ಗೆ ಡಿಸಿಎಂ ಉತ್ತರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ಮತ್ತು ಇತರರಿಂದ ಸರ್ಕಾರ ಅಭಿಪ್ರಾಯ ಸಂಗ್ರಹಿಸುತ್ತಿದೆ ಮತ್ತು ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.  

ಹಾಗಿದ್ದರೂ , ಆರೋಗ್ಯ ಸಚಿವ ಕೆ ಸುಧಾಕರ್, ರಾಜ್ಯದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯು ದೈನಂದಿನ ಪ್ರಕರಣಗಳು 5,000 ಕ್ಕಿಂತಲೂ ಕಡಿಮೆಯಾದ ನಂತರ ಕಠಿಣ ನಿರ್ಬಂಧಗಳನ್ನು ಸಡಿಲಿಸಬಹುದು ಎಂದು ಸೂಚಿಸಿದೆ ಎಂದು ಹೇಳಿದರು. "ಪಾಸಿಟಿವಿಟಿದರವು ಶೇಕಡಾ 5 ಕ್ಕಿಂತ ಕಡಿಮೆಯಿರಬೇಕು ಮತ್ತು ಹೊಸ ಪ್ರಕರಣಗಳ ಸಂಖ್ಯೆ ) 5,000 ಕ್ಕಿಂತ ಕಡಿಮೆಯಿರಬೇಕು ಎಂದು ಅವರು (ಟಿಎಸಿ) ಹೇಳಿದ್ದಾರೆ, ಆಗ ಮಾತ್ರ ನಿರ್ಬಂಧಗಳನ್ನು ಸಡಿಲಿಸಬಹುದು ಮತ್ತು ಅಲ್ಲಿಯವರೆಗೆ ಜಾರಿಯಲ್ಲಿರುವ ಕಠಿಣ ಕ್ರಮಗಳು ಮುಂದುವರಿಯಲಿದೆ, "ಅವರು ಹೇಳಿದರು.

ಟಿಎಸಿಯ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಚರ್ಚಿಸಿದ್ದೇನೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

"ನಾವು ಅನ್ ಲಾಕ್ ಮಾಡಲು ಹೋದಾಗ ಅದು ಎಲ್ಲರಲ್ಲಿ ಅಚ್ಚರಿ ಮೂಡಿಸುವಂತಿರಬೇಕು." ಎಂದು ಸಿಎಂ ಹೇಳಿದ್ದಾರೆ. "ಅನ್ ಲಾಕ್  ಮಾಡಿದರೆ ಅದು ಹಂತ ಹಂತವಾಗಿರಬೇಕು ಮತ್ತು ಅದನ್ನು ಒಮ್ಮೆಗೇ ಮಾಡಲು ಸಾಧ್ಯವಿಲ್ಲ, ಏಕೆಂದರೆ ಕೊರೋನಾ ನಮ್ಮ ನಿರೀಕ್ಷೆಗಳ ಮಟ್ಟಕ್ಕೆ ಇಲ್ಲ. , ಪ್ರಕರಣಗಳು ಕಡಿಮೆಯಾಗಿದ್ದರೂ, ಅದು ಇನ್ನೂ 5 ಶೇ. ಗಿಂತ ಕಡಿಮೆ ಇಲ್ಲ. ಹಲವಾರು ಜಿಲ್ಲೆಗಳಲ್ಲಿಕೊರೋನಾ ಇನ್ನೂ  ಹೆಚ್ಚಿರುವುದರಿಂದ ನಾವು ಜಾಗರೂಕರಾಗಿರಬೇಕು "ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರವು ಆರಂಭದಲ್ಲಿ ಏಪ್ರಿಲ್ 27 ರಿಂದ 14 ದಿನಗಳ ಲಾಕ್ ಡೌನ್ಘೋಷಿಸಿತ್ತು, ಆದರೆ ತರುವಾಯ ಮೇ 10 ರಿಂದ ಮೇ 24 ರವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಿತು, ಏಕೆಂದರೆ ಕೋವಿಡ್  ಪ್ರಕರಣಗಳು ಹೆಚ್ಚಾಗುತ್ತಿದ್ದವು. ಲಾಕ್‌ಡೌನ್ ನೀಡುವ  ಫಲಿತಾಂಶಗಳು ಮತ್ತು ತಜ್ಞರ ಸಲಹೆಯನ್ನು ಉಲ್ಲೇಖಿಸಿ, ಇದನ್ನು ಜೂನ್ 7 ರವರೆಗೆ ವಿಸ್ತರಿಸಲಾಯಿತು.

SCROLL FOR NEXT