(ಎಡದಿಂದ) ಶ್ರೀನಿವಾಸ್ ಬಿಂಡಿಗನವಿಲೆ, ಗಣೇಶ್ ಪಾಪಣ್ಣ, ಗೀತ್ ಗೀತ್ ಜೇಸನ್ ವಾಜ್, ಅಜಯ್ ಅಪ್ಪಾರೂಪ್, ಯತೀಶ್ ವೆಂಕಟೇಶ್ 
ರಾಜ್ಯ

ಕೋವಿಡ್-19: ನೆರವಿನ ನಿಧಿ ಸಂಗ್ರಹಕ್ಕಾಗಿ 60 ಕಲಾವಿದರಿಂದ ರಾಜ್ಯಾದ್ಯಂತ 12 ಗಂಟೆಗಳ ಮನರಂಜನೆ ಸೆಷನ್

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೇನೋ ಕಡಿಮೆಯಾಗುತ್ತಿವೆ, ಆದರೆ ಕೋವಿಡ್-19 ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅದೆಷ್ಟೋ ಕುಟುಂಬಗಳಿಗೆ ಇನ್ನೂ ಸಾಧ್ಯವಾಗಿಲ್ಲ. 

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೇನೋ ಕಡಿಮೆಯಾಗುತ್ತಿವೆ, ಆದರೆ ಕೋವಿಡ್-19 ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅದೆಷ್ಟೋ ಕುಟುಂಬಗಳಿಗೆ ಇನ್ನೂ ಸಾಧ್ಯವಾಗಿಲ್ಲ. 

ಈ ಹಂತದಲ್ಲಿ ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ ಸಂಗ್ರಹಿಸುವುದಕ್ಕಾಗಿ 60 ಕಲಾವಿದರ ತಂಡ ರಾಜ್ಯಾದ್ಯಂತ ವರ್ಚ್ಯುಯಲ್ ಮೋಡ್ ನಲ್ಲಿ ಜೂ.05 ರಂದು 12 ಗಂಟೆಗಳ ಮನರಂಜನಾ ಸೆಷನ್ ಮ್ಯಾರಥಾನ್ ನ್ನು ಆಯೋಜಿಸಿದೆ. 

ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಸಿನಿಮಾ ಪ್ರೊಡಕ್ಷನ್ ಸಂಸ್ಥೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ನ ಗಣೇಶ್ ಪಾಪಣ್ಣ, ಕಂಟೆಂಟ್ ಅಭಿವೃದ್ಧಿ ಸಂಸ್ಥೆ ಮಲ್ಟಿಬಾಕ್ಸ್ ಎಂಟರ್ಟೈನ್ಮೆಂಟ್ ನ ಗೀತ್ ಜೇಸನ್ ವಾಜ್ ಮತ್ತು ಚರಣ್ ರಮೇಶ್ ಜನಪ್ರಿಯ ಯೂಟ್ಯೂಬ್ ಚಾನಲ್ ತರಲೆಬಾಕ್ಸ್ ಜೊತೆಗೂಡಿ ಈ ಸೆಷನ್ ನ್ನು ಆಯೋಜಿಸಿದ್ದಾರೆ. 

ಕರ್ನಾಟಕದ ಸ್ಪ್ಯಾನ್ ಪ್ರಕಾರಗಳ ಲೈವ್ (Live of Karnataka span genres) ಶೀರ್ಷಿಕೆಯಡಿ 12 ಗಂಟೆಗಳ ಕಾರ್ಯಕ್ರಮ ತರಲೆ ಬಾಕ್ಸ್ ನಲ್ಲಿ ಪ್ರಸಾರವಾಗಲಿದೆ.  

ಕೋವಿಡ್-19 ನಿಂದ ಸಂಕಷ್ಟ ಎದುರಿಸುತ್ತಿರುವ ಸಿನಿಮಾ ರಂಗದ ದೈನಂದಿನ ವೇತನ ಪಡೆಯುವ ಕಾರ್ಮಿಕರಿಗೆ ಹಾಗೂ ಸಾಮಾನ್ಯ ಜಾನಪದರಿಗೆ ನೆರವು ನೀಡುವುದು ಈ ಕಾರ್ಯಕ್ರಮ ಆಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. 

ಇದಕ್ಕಾಗಿ ನಾವು ಟ್ರಸ್ಟ್ ಒಂದರ ಸಹಾಯ ಪಡೆಯುತ್ತಿದ್ದು, ಅಗತ್ಯವಿರುವವರಿಗೆ ನೆರವು ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಬಿಂಡಿಗನವಿಲೆ ಹೇಳಿದ್ದಾರೆ. ನಟ ಆರ್ಯನ್ ಸಂತೋಷ್ ಜನರಲ್ಲಿ ಸಕಾರಾತ್ಮಕತೆ ಮೂಡಿಸುವ, ಉತ್ತೇಜಿಸುವ ಕುರಿತು ಮಾತನಾಡಲಿದ್ದು, ಸ್ವಾರಸ್ಯಕರ ಲಘು ಹಾಸ್ಯದ ಸಂಗತಿಗಳನ್ನು ಹಂಚಿಕೊಳ್ಳಲಿದ್ದಾರೆ. 

ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುವುದಕ್ಕಾಗಿ ಡಿಜಿಟಲ್ ಮಾಧ್ಯಮದ ಸದ್ಬಳಕೆ ಇದಾಗಿದೆ, ಲಾಕ್ ಡೌನ್ ನಿಂದ ಸಿನಿರಂಗ ಮುಚ್ಚಿದೆ, ತಂತ್ರಜ್ಞರು ಸಹಾಯಕ್ಕಾಗಿ ಎದುರುನೋಡುತ್ತಿದ್ದಾರೆ. ಈ ಪ್ರಯತ್ನದಿಂದ ಹಲವರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ಶ್ರೀನಿವಾಸ್ ಬಿಂಡಿಹನವಿಲೆ, ಸ್ಟ್ಯಾಂಡ್ ಅಪ್ ಕಾಮಿಕ್ ಪವನ್ ವೇಣುಗೋಪಾಲ್ ಮಾತನಾಡಿದ್ದು, ಪ್ರೇಕ್ಷಕರಿಗೆ 12 ಗಂಟೆಗಳ ಕಾಲ ಮನರಂಜನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ನಾನು ಲಾಕ್ ಡೌನ್ ಹಾಗೂ ಆ ಜೀವನ ಜೈಲಿಯಲ್ಲಿನ ಹಾಸ್ಯದ ಬಗ್ಗೆ ಮಾತನಾಡಲಿದ್ದೇನೆ, ಕೋವಿಡ್-19 ಪರಿಹಾರಾರ್ಥವಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ನಾನು ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ, 12 ಗಂಟೆಗಳ ಕಾರ್ಯಕ್ರಮದಲ್ಲಿ 15-30 ನಿಮಿಷಗಳ ಸೆಷನ್ ಇರಲಿದೆ. ಇದರಲ್ಲಿ ಶಮಂತ್ ಗೌಡ, ಅರವಿಂದ್ ಕೆ.ಪಿ, ಮಂಜು ಪಾವಗಡ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದವರು ಇರಲಿದ್ದಾರೆ. 

ಕಲಾವಿದರಾದ ಅನುಪಮ ಗೌಡ, ನಿರ್ದೇಶಕ ಹಾಗೂ ರೇಡಿಯೋ ಜಾಕಿ ಮಯೂರ ರಾಘವೇಂದ್ರ, ಭುವನ್ ಪೊನ್ನಣ್ಣ, ಡಿಜಿಟಲ್ ಕಂಟೆಂಟ್ ವಿಭಾಗದಲ್ಲಿರುವ ಶ್ರುತಿ ಸಹ ಭಾಗವಹಿಸಲಿದ್ದಾರೆ. ರಘು ದೀಕ್ಷಿತ್, ವಾಸು ದೀಕ್ಷಿತ್ ಮುಂತಾದವರು ಸಂಗೀತದೊಂದಿಗೆ ಮನರಂಜನೆ ನೀಡಲಿದ್ದಾರೆ" ಎಂದು ಶ್ರೀನಿವಾಸ್ ಬಿಂಡಿಗನವಿಲೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT