ಬೆಳಗಾವಿ ವಿಮಾನ ನಿಲ್ದಾಣ 
ರಾಜ್ಯ

ಬೆಳಗಾವಿ, ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಚಾಲನಾ ತರಬೇತಿ ಅಕಾಡೆಮಿ ಸ್ಥಾಪನೆ!

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ವೈಮಾನಿಕ ಚಾಲನಾ ತರಬೇತಿ ಸಂಸ್ಥೆ ನೀತಿಯ ಅಡಿ ಬೆಳಗಾವಿ, ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಚಾಲನಾ ತರಬೇತಿ ಅಕಾಡೆಮಿ ಶೀಘ್ರವೇ ಸ್ಥಾಪನೆಯಾಗಲಿದೆ. 

ಬೆಳಗಾವಿ: ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ವೈಮಾನಿಕ ಚಾಲನಾ ತರಬೇತಿ ಸಂಸ್ಥೆ ನೀತಿಯ ಅಡಿ ಬೆಳಗಾವಿ, ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಚಾಲನಾ ತರಬೇತಿ ಅಕಾಡೆಮಿ ಶೀಘ್ರವೇ ಸ್ಥಾಪನೆಯಾಗಲಿದೆ. 

ದೇಶದ ಒಟ್ಟು 5 ನಗರಗಳಲ್ಲಿ ಈ ತರಬೇತಿ ಅಕಾಡೆಮಿಗಳು ಸ್ಥಾಪನೆಯಾಗುತ್ತಿದ್ದು, ಜಲ್ಗಾಂವ್, ಖಜುರಾಹೊ, ಲೀಲಬರಿ ಅಕಾಡೆಮಿಗಳನ್ನು ಪಡೆಯುತ್ತಿರುವ ಇತರ ನಗರಗಳಾಗಿವೆ. 

ಎಎಐ ಈ ಸಂಬಂಧ ಕರೆದಿದ್ದ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫ್ಲೈಯಿಂಗ್ ಏಜೆನ್ಸಿ (ಬಿಡ್ಡಿಂಗ್ ನಲ್ಲಿ ವಿಜೇತ ಸಂಸ್ಥೆಗಳು) ಮೇ.31 ರಂದೇ ಅಧಿಕೃತ ಪತ್ರಗಳನ್ನೂ ರವಾನೆ ಮಾಡಲಾಗಿದ್ದು, ಏಷ್ಯಾ ಪೆಸಿಫಿಕ್, ಜೆಟ್ಸರ್ವ್, ರೆಡ್ ಬರ್ಡ್, ಸಂವರ್ಧನ ಹಾಗೂ ಸ್ಕೈ ನೆಕ್ಸ್ ಸಂಸ್ಥೆಗಳಿಗೆ ಪತ್ರಗಳು ಸಿಕ್ಕಿವೆ. 

ಮೂಲಗಳ ಪ್ರಕಾರ ಬೆಳಗಾವಿಯಲ್ಲಿ ಅಕಾಡೆಮಿಗಳನ್ನು ಸ್ಥಾಪಿಸುವ ಜವಾಬ್ದಾರಿ ಸಂವರ್ಧನೆ ಹಾಗೂ ರೆಡ್ ಬರ್ಡ್ ಸಂಸ್ಥೆಗಳಿಗೆ ಸಿಕ್ಕಿದ್ದು ಶೀಘ್ರವೇ ಸಂಸ್ಥೆಗಳು ಅಕಾಡೆಮಿಯ ಕೆಲಸಗಳನ್ನು ಪ್ರಾರಂಭಿಸಲಿವೆ. 

ಅಕಾಡೆಮಿ ಸ್ಥಾಪನೆಗೆ ಎಎಐ 500೦ ಸ್ಕ್ವೇರ್ ಮೀಟರ್ ಪ್ರದೇಶವನ್ನು ಹ್ಯಾಂಗರ್ ಮತ್ತು ಏಪ್ರನ್ ಗಾಗಿ ಏಜೆನ್ಸಿಗಳಿಗೆ ನೀಡಲು ನಿರ್ಧರಿಸಿದೆ. ಶಿನೋಳಿ ಬಳಿ ಇರುವ ವಿಮಾನ ನಿಲ್ದಾಣದ ಈ ಪ್ರದೇಶವನ್ನು 25 ವರ್ಷಗಳ ಕಾಲ ಎರಡೂ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಲಾಗುತ್ತದೆ ಎಂದು ಎಎಐ ತಿಳಿಸಿದೆ. 

ಕಲಬುರ್ಗಿಯಲ್ಲಿರುವ ವಿಮಾನ ನಿಲ್ದಾಣದಲ್ಲಿನ ಅಕಾಡೆಮಿಗಳನ್ನು ಏಷ್ಯಾ ಪೆಸಿಫಿಕ್ ಹಾಗೂ ರೆಡ್ ಬರ್ಡ್ ಸಂಸ್ಥೆಗಳು ಸ್ಥಾಪಿಸಲಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಭಾರತವನ್ನು ಜಾಗತಿಕ ಮಟ್ಟದಲ್ಲಿ ವೈಮಾನಿಕ ಚಾಲನಾ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದಾಗಿ ಅಕಾಡೆಮಿಗಳನ್ನು ಸ್ಥಾಪಿಸುವ ಕ್ರಮ ಕೈಗೊಂಡಿದೆ ಎಎಐ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!