ರಾಜ್ಯ

ಮಂಗಳೂರು: 10 ಲಕ್ಷ ರೂ. ಮೌಲ್ಯದ ಎಂಡಿಎಂಎ, ಕಾರು, ಮೊಬೈಲ್ ಫೋನ್ ವಶ, ಮೂವರ ಸೆರೆ

Raghavendra Adiga

ಮಂಗಳೂರು: ಕೊಣಾಜೆ ಪೊಲೀಸರು ಮತ್ತು ನಗರ ಅಪರಾಧ ಶಾಖೆ ಜೂನ್ 4 ಶುಕ್ರವಾರ, ಅಪಾರ ಪ್ರಮಾಣದ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದ್ದು ಉಪ್ಪಳದ ಮೂವರನ್ನು ಬಂಧಿಸಿದ್ದಾರೆ. 10 ಲಕ್ಷ ಮೌಲ್ಯದ 170 ಗ್ರಾಂ ಎಂಡಿಎಂಎ, ಒಂದು ಕಾರು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಹಮ್ಮದ್ ಮುನಾಫ್, ಮೊಹಮ್ಮದ್ ಮುಜಾಂಬಿಲ್, ಮತ್ತು ಅಹ್ಮದ್ ಮಸೂಕ್ ಅವರು ಬಂಧಿತರಾಗಿದ್ದು ಇವರಲ್ಲಿ ಮುನಾಫ್ ಬಿಬಿಎ ಪೂರ್ಣಗೊಳಿಸಿದರೆ, ಮಸೂಕ್ ಬೆಂಗಳೂರಿನ ಜೆ.ಪಿ.ನಗರದ ಹೋಟೆಲ್‌ ನಲ್ಲಿ ಕೆಲಸ ಮಾಡುತ್ತಿದ್ದ. ಮುಜಾಂಬಿಲ್ ನೆಲಮಂಗಲ, ಬೆಂಗಳೂರುಗಳಲ್ಲಿ ಸ್ಪ್ರೋರ್ಟ್ಸ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ.

ಆರೋಪಿಗಳು ಬೆಂಗಳೂರು, ಮಂಗಳೂರು, ಉಪ್ಪಳ ಮತ್ತುಕಾಸರಗೋಡುಗಳಲ್ಲಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಅವರನ್ನು ಹಾಸನದಲ್ಲಿ ಪತ್ತೆ ಮಾಡಕಾಗಿತ್ತು, ಮತ್ತು ಕೊಣಾಜೆ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು.

ಆರೋಪಿಗಳು ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಯೊಬ್ಬರಿಂದ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಇದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 17,37,000 ರೂ. ಆಗಿದ್ದು  ಇಎನ್‌ಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT