ಸಂಗ್ರಹ ಚಿತ್ರ 
ರಾಜ್ಯ

ಟರ್ಫ್ ಕ್ಲಬ್: ಬೆಟ್ಟಿಂಗ್ ಮೊತ್ತದ ಮೇಲಿನ ಜಿಎಸ್'ಟಿ ರದ್ದು

ಬೆಂಗಳೂರು ಟರ್ಫ್ ಕ್ಲಬ್ ಹಾಗೂ ಮೈಸೂರು ರೇಸ್ ಕ್ಲಬ್ ಲಿಮಿಟೆಡ್​ಗಳು ನಡೆಸುವ ಕುದುರೆ ರೇಸ್​ನ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸುವಂತೆ ಜಿಎಸ್​ಟಿ ನಿಯಮ ಹೇರಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಹಾಗೂ ಮೈಸೂರು ರೇಸ್ ಕ್ಲಬ್ ಲಿಮಿಟೆಡ್​ಗಳು ನಡೆಸುವ ಕುದುರೆ ರೇಸ್​ನ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸುವಂತೆ ಜಿಎಸ್​ಟಿ ನಿಯಮ ಹೇರಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್​ಟಿ ವಿಧಿಸುವ ಕೇಂದ್ರ ಹಾಗೂ ರಾಜ್ಯಗಳ ಕ್ರಮ ಪ್ರಶ್ನಿಸಿ ಬೆಂಗಳೂರು ಹಾಗೂ ಮೈಸೂರಿನ ರೇಸ್ ಕ್ಲಬ್​ಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಕೇಂದ್ರ ಸರಕು ಮತ್ತು ಸೇವೆ-2017ರ ನಿಯಮ 31ಎ(3) ಹಾಗೂ ಕರ್ನಾಟಕ ಸರಕು ಮತ್ತು ಸೇವೆ ತೆರಿಗೆ ನಿಯಮ 31ಎ ಅನ್ನು ರದ್ದುಪಡಿಸಿದೆ.

ಸ್ಟಾಕ್ ಬ್ರೋಕರ್‌ ಅಥವಾ ಟ್ರಾವೆಲ್‌ ಏಜೆಂಟ್‌ಗಳ ರೀತಿಯಲ್ಲಿ ಈ ಎರಡು ರೇಸ್ ಕ್ಲಬ್‌ಗಳು ಕೇವಲ ಕಮಿಷನ್ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣದಿಂದ ಈ ಕ್ಲಬ್‌ಗಳು ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸಲು ಆಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸರಕು ಮತ್ತು ಸೇವೆಗಳು ತೆರಿಗೆ ಕಾಯ್ದೆ-2017ಕ್ಕೆ 2018ರ ಜನವರಿ 25 ರಂದು ಕೇಂದ್ರ ಸರ್ಕಾರ ತಿದ್ದುಪಡಿ ತಂದು ನಿಯಮ 31ಎ(3) ಸೇರ್ಪಡೆಗೊಳಿಸಿದ್ದನ್ನು ಪ್ರಶ್ನಿಸಿ ಈ ಎರಡು ರೇಸ್ ಕ್ಲಬ್​ಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ರೇಸ್ ಚಟುವಟಿಕೆಗಳ ಸಂಬಂಧ ಗಳಿಸುವ ಕಮಿಷನ್ ಮೇಲೆ ಮಾತ್ರ ತೆರಿಗೆ ಪಾವತಿಸಲು ಅವಕಾಶವಿದೆ. ಆದರೆ, ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸಲು ಅವಕಾಶವಿಲ್ಲ ಎಂದು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT