ಮೃತ ಯುವಕ ನಿಖಿಲ್ 
ರಾಜ್ಯ

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಕೊಲೆ

22ರ ಯುವಕನೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯ ಸಮೀಪ ನಡೆದಿದೆ.

ಕಲಬುರಗಿ: 22ರ ಯುವಕನೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯ ಸಮೀಪ ನಡೆದಿದೆ.

ಮೃತನನ್ನು ನಿಖಿಲ್ ಕನೇಗಾರ ಎನ್ನಲಾಗಿದ್ದು  ಕರುಣೇಶ್ವರ ನಗರ ನಿವಾಸಿಯಾಗಿದ್ದ. ಘಟನೆಯಲ್ಲಿ ನಿಖಿಲ್ ಸೋದರ ಹಾಗೂ ಆತನ ತಾಯಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತರಕಾರಿ ಖರೀದಿಸಲು ಬಂದಾಗ ಯುವಕನೊಬ್ಬ ಕ್ಷುಕ್ಕಕ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಆ ನಂತರ ಸ್ನೇಹಿತರನ್ನು ಕರೆಸಿ ಮಾರಕಾಸ್ತ್ರಗಳಿಂದ ನಿಖಿಲ್ ಮೇಲೆ ಹಲ್ಲೆ ಮಾಡಿದ್ದಾನೆ. ಆ ವೇಳೆ ನಿಖಿಲ್ ಸ್ಥಳದಲ್ಲೇ  ಸಾವನ್ನಪ್ಪಿದ್ದಾನೆ.

ಯುವತಿ ವಿಚಾರಕ್ಕೆ ಜಗಳ?

ನಿಖಿಲ್ ಸಂಬಂಧಿ ಯುವತಿಯೊಬ್ಬಳಿಗೆ ನಿಶ್ಚಿತಾರ್ಥವಿತ್ತು. ಆದರೆ ಆ ಯುವತಿಯನ್ನು ಬೇರೊಬ್ಬ ಯುವಕ ಪ್ರೀತಿಸುತ್ತಿದ್ದ. ಆ ವಿಚಾರವನ್ನು ಪ್ರೀತಿಸುತ್ತಿದ್ದ ಯುವಕ ನಿಶ್ಚಯವಾಗುತ್ತಿದ್ದದ್ದ ಯುವಕನಿಗೆ ಹೇಳಿದ್ದಾಗಿ ಈ ಬಗ್ಗೆ ಇಬ್ಬರ ಕುಟುಂಬದ ನಡುವೆ ಜಗಳ ನಡೆದಿದೆ. ಆ ವೇಳೆ ಜಗಳ ಪರಿಹರಿಸಲು ನಿಖಿಲ್ ಅಲ್ಲಿಗೆ ತೆರಳಿದ್ದನೆನ್ನಲಾಗಿದೆ.

ಆದರೆ ಈ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಘಟನೆ ಸಂಬಂಧ ಕಲಬುರಗಿ  ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

SCROLL FOR NEXT