ರಾಜ್ಯ

ಅರಣ್ಯದಲ್ಲಿ ಕೋತಿಗಳಿಗೆ ಆಹಾರ, ನೆಲೆ ಕಲ್ಪಿಸಲು ಯೋಜನೆ ರೂಪಿಸಿ: ಸರ್ಕಾರಕ್ಕೆ 'ಹೈ' ಸೂಚನೆ

Manjula VN

ಬೆಂಗಳೂರು: ನಗರಕ್ಕೆ ಮಂಗಗಳು ಪ್ರವೇಶಿಸುವುದ್ನು ತಡೆಯಲು ಮತ್ತು ಅವುಗಳಿಗೆ ಅರಣ್ಯದಲ್ಲಿ ಆಹಾರ ಮತ್ತು ನೆಲೆ ಕಲ್ಪಿಸಲು ಸೂಕ್ತ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 

ಮಂಗಗಳು ಆಹಾರ ಅರಸಿ ನಗರದ ಜನವಸತಿ ಪ್ರದೇಶ ಪ್ರವೇಶಿಸುತ್ತಿರುವುದನ್ನು ತಡೆಯುವ ಸಂಬಂಧ ವಕೀಲ ರಾಧಾನಂದನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಎಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. 

ವಿಚಾರಣೆ ವೇಳೆ ಅರ್ಜಿದಾರ ವಕೀಲರು ವಾದಿಸಿ, ಮಂಗಗಳು ಆಹಾರವನ್ನು ಅರಸಿ ಜನ ವಸತಿ ಪ್ರದೇಶಗಳಿಗೆ ಬರುತ್ತಿವೆ ಅವುಗಳಿಗೆ ಅರಣ್ಯಗಳಲ್ಲಿ ಪುನರ್ವಸತಿ ಕಲ್ಪಿಸಬೇಕೆಂದು ನ್ಯಾಯಾಲಯವನ್ನು ಕೋರಿದರು. 

ಬಳಿಕ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್, ಬೆಂಗಳೂರಿನ ಬಳಿಯೇ ಅರಣ್ಯ ಪ್ರದೇಶವಿದೆ. ಪ್ರಾಣಿಗಳ ವಸತಿಯನ್ನು ಜನ ಅತಿಕ್ರಮಿಸುತ್ತಿದ್ದಾರೆ. ಹೀಗಾಗಿ ಕೋತಿಗಳ ಜನವಸತಿಯನ್ನು ಪ್ರವೇಶಿಸುವುದು ಅಚ್ಚರಿ ಮೂಡಿಸುವುದಿಲ್ಲ. ರಣ್ಯದಲ್ಲಿ ಕೋತಿಗಳಿಗೆ ಆಹಾರ ಮತ್ತು ನೆಲೆ ಕಲ್ಪಿಸಲು ಯೋಜನೆ ರೂಪಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಅಲ್ಲದೆ, ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿದೆ. 

ಪ್ರಾಣಿಗಳ ವಸತಿಯನ್ನು ಜನ ಅತಿಕ್ರಮಿಸುತ್ತಿರುವುದರಿಂದ ಕೋತಿಗಳು ಜನ ವಸತಿಯನ್ನು ಪ್ರವೇಶಿಸುವುದು ಅಚ್ಚರಿ ಮೂಡಿಸುವುದಿಲ್ಲ ಎಂದಿರುವ ಹೈಕೋರ್ಟ್, ಅರಣ್ಯದಲ್ಲಿ ಕೋತಿಗಳಿಗೆ ಆಹಾರ ಮತ್ತು ನೆಲೆ ಕಲ್ಪಿಸಲು ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. 

SCROLL FOR NEXT